ಧಾರವಾಡ –
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವ ಣೆಯನ್ನು ಶೀಘ್ರದಲ್ಲೇ ಆರಂಭ ಮಾಡುವಂತೆ ಒತ್ತಾ ಯಿಸಿ ಧಾರವಾಡದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀ ಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ ಮಾಡಿದೆ.

ನಗರಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರಿಗೆ ಮನವಿ ನೀಡಿ ಒತ್ತಾಯವನ್ನು ಮಾಡಿದರು. ರಾಜ್ಯಾಧ್ಯಕ್ಷ ಅಶೋಕ ಸಜ್ಜನ ನೇತ್ರತ್ವದಲ್ಲಿ ವರ್ಗಾವಣೆ ಕುರಿತಂ ತೆ ಮನವಿ ನೀಡಲಾಯಿತು.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ವರ್ಗಾವಣೆಯನ್ನು ಕೂಡಲೇ ಆರಂಭ ಮಾಡಬೇಕು ಬೇಸಿಗೆ ರಜೆಯನ್ನು ನೀಡಬೇಕು ಇದರೊಂದಿಗೆ ಇನ್ನೂ ಹಲವು ಬೇಡಿಕೆಗಳ ಕುರಿತಂತೆ ಧ್ವನಿ ಎತ್ತಬೇಕೆಂದು ಒತ್ತಾಯವನ್ನು ಮಾಡಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಮತ್ತು ಎಲ್ ಐ ಲಕ್ಕಮ್ಮನವರ ನೇತ್ರತ್ವದಲ್ಲಿ ಈ ಒಂದು ಮನವಿಯನ್ನು ನೀಡಲಾಯಿತು. ಜೊತೆಗೆ ಕೂಡಲೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯವನ್ನು ಮಾಡಲಾ ಯಿತು. ಇನ್ನೂ ಈ ಒಂದು ಸಂದರ್ಭದಲ್ಲಿ ಶಿಕ್ಷಕ ಬಂಧುಗಳಾದ ಅಕ್ಬರಅಲಿ ಸೋಲಾಪೂರ, ಎಲ್ ಐ ಲಕ್ಕಮ್ಮನವರ ರಾಜುಸಿಂಗ್ ಹಲವಾಯಿ, ಎಸ್ ಸಿ ಹೊಳೆಯನ್ನವರ, ಎಸ್ ಎಸ್ ಧಣಿಕೊಂಡ, ಎಸ್ ಐ ಜಾಧವ, ಎಮ್ ಎಸ್ ಅಕ್ಕಿ, ಹೆಚ್ ಕೆ ಸುಲ್ತಾನಿಪೂ ರಿ, ನಾರಾಯಣ ಭಜಂತ್ರಿ,ರಂಜನಾ ಪಂಚಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು