ಹುಟ್ಟೂರಿನ ಶಿಕ್ಷಕರಿಗೆ ಗೌರವಿಸುವ ಮೂಲಕ ಶಿಕ್ಷಕರ ದಿನೋತ್ಸವಕ್ಕೆ ಮೆರಗು ತಂದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ……

Suddi Sante Desk

ಹೆಬ್ಬಳ್ಳಿ –

ಹುಟ್ಟೂರಿನ ಶಿಕ್ಷಕರಿಗೆ ಗೌರವಿಸುವ ಮೂಲಕ ಶಿಕ್ಷಕರ ದಿನೋತ್ಸವಕ್ಕೆ ಮೆರಗು ತಂದ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ.ಹೌದು ಧಾರವಾಡ ಜಿಲ್ಲೆಯ ಧಾರವಾಡ ತಾಲೂ ಕಿನ ಹೆಬ್ಬಳ್ಳಿ ಗ್ರಾಮದವರು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ ಅವರು ತನ್ನ ಹುಟ್ಟೂರು ಹೆಬ್ಬಳ್ಳಿಯ ಎಲ್ಲಾ ಶಾಲೆಗಳ ಮುಖ್ಯ ಗುರುಗಳನ್ನು ಸತ್ಕರಿಸುವ ಮೂಲಕ ಶಿಕ್ಷಕ ದಿನೋತ್ಸವಕ್ಕೆ ಹೊಸ ಮೆರಗನ್ನು ತಂದರು.


ಈ ಒಂದು ಅವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಾತನಾಡಿದ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಚಂದ್ರಶೇಖರ ಮಟ್ಟಿ ಇವತ್ತು ಪವಿತ್ರ ದಿನ ಅಕ್ಷರದ ಬೆಳಕನ್ನು ನೀಡಿದ ಗುರುಗಳಿಗೆ ಗೌರವಿಸುವ ದಿನ ಈ ದಿನವನ್ನು ನಾವೂ ಸಹ ಶಾಲಾಭಿವೃದ್ದಿ ಸಮಿತಿಯವರು ಎಲ್ಲಾ ನಮ್ಮ ಶಾಲೆಯ ಗುರು ವೃಂದಕ್ಕೆ ಸತ್ಕರಿಸುವ ಕಾರ್ಯವನ್ನು ನಾಳೆಯ ದಿನ ಮಾಡಲಾಗುತ್ತಿದೆ ಕಾರಣ ಇಂದು ಅತ್ಯಂತ ಕ್ರಿಯಾಶೀಲ ದಕ್ಷ ಪ್ರಾಮಾಣಿಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಮೇಶ ಬಮ್ಮಕ್ಕನವರ ತಾಲೂಕು ಮಟ್ಟದ ಶಿಕ್ಷಕರ ದಿನವನ್ನು ಧಾರವಾಡದಲ್ಲಿ ಆಯೋಜಿಸಿ ದ್ದಾರೆ ಎಂದರು.

ನಮ್ಮ ಕಾರ್ಯಕ್ರಮವನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹೇಳಿ ಶಿಕ್ಷಕರ ದಿನದ ಶುಭಾಷಯಗಳನ್ನು ತಿಳಿಸಿ ದರು ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ ಶಾಲಾಭಿವೃದ್ದಿ ಸಮಿತಿಯ ಸದಸ್ಯ ಅಶೋಕ ಹಡಪದ,ಚಂದ್ರಶೇಖರ ಲಕ್ಕಮ್ಮನವರ, ಸಿ ಡಿ ಬುಯ್ಯಾರ,ಪ್ರಭಯ್ಯವಿರಕ್ತಮಠ,ನಾಗಮ್ಮ ಹೂಗಾರ ಇದ್ದರು.

ವರದಿ – ಎಲ್ ಐ ಲಕ್ಕಮ್ಮನವರ ಶಿಕ್ಷಕರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.