ಬೆಂಗಳೂರು –
ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ನಿಯೋಗವು NPS ಸಮಿತಿ ಅಧ್ಯಕ್ಷರನ್ನು ಭೇಟಿ ಯಾಗಿ ಚರ್ಚೆ ಮಾಡಿದರು ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ರವರ ನಿಯೋಗವು ಎನ್.ಪಿ.ಎಸ್ ಸಮಿತಿಯ ಅಧ್ಯಕ್ಷರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಾದ ಅಂಜುಂ ಪರ್ವೇಜ್ ರವರನ್ನು ಭೇಟಿ ಮಾಡಿ ಎನ್.ಪಿ.ಎಸ್ ರದ್ದುಗೊಳಿಸುವ ಸಂಬಂಧ ವಿವರವಾಗಿ ಚರ್ಚಿಸಿದರು
ಈಗಾಗಲೇ ಎನ್.ಪಿ.ಎಸ್ ರದ್ದುಗೊಳಿಸಿರುವ 2 ರಾಜ್ಯ ಗಳಿಗೆ ಎನ್.ಪಿ.ಎಸ್ ಸಮಿತಿಯ ಸದಸ್ಯರನ್ನು ಕಳುಹಿಸ ಲಾಗಿದ್ದು ಮುಂದಿನ ವಾರದಲ್ಲಿ ವರದಿಯನ್ನು ಪಡೆದು, ಏಪ್ರಿಲ್ ಅಂತ್ಯದೊಳಗೆ ಎನ್.ಪಿ.ಎಸ್. ರದ್ದುಗೊಳಿ ಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಹೆಚ್ ಗಿರಿಗೌಡ ರವರು, ಉಪಾಧ್ಯಕ್ಷರಾದ ಶ್ರೀ ಚೇತನ್ ರಾಜು ರವರು ಉಪಸ್ಥಿತರಿದ್ದರು ಇದರೊಂದಿಗೆ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ನಿರೀಕ್ಷೆ ಯಲ್ಲಿದ್ದ ನೌಕರರಿಗೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿನ ನಿಯೋಗವು ಶುಭ ಸುದ್ದಿ ಯನ್ನು ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..