ಹುಬ್ಬಳ್ಳಿ –
ಶಿಕ್ಷಕರ ವರ್ಗಾವಣೆಯನ್ನು ಕೂಡಲೇ ಮತ್ತೆ ಆರಂಭ ಮಾಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಒತ್ತಾಯ ಮಾಡಿದೆ.
ಸಂಘಟನೆಯ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ನೇತೃತ್ವದಲ್ಲಿನ ಸಂಘಟನೆಯ ಸದಸ್ಯರು ಶಿಕ್ಷಕ ಬಂಧುಗಳು ಪ್ರತಿಭಟನೆ ಮಾಡಿ ಒತ್ತಾಯವನ್ನು ಮಾಡಿದರು.ನಗರದಲ್ಲಿನ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನಿವಾಸದ ಮುಂದೆ ಪ್ರತಿಭಟನೆ ಮಾಡಿ ಒತ್ತಾಯವನ್ನು ಮಾಡಿದರು
ಇದೇ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದ ಶಿಕ್ಷಕ ಬಂಧುಗಳು ಕೂಡಲೇ ವರ್ಗಾವಣೆಯನ್ನು ಆರಂಭಿಸುವಂತೆ ಒತ್ತಾಯವನ್ನು ಮಾಡಿದರು. ಅಲ್ಲದೇ ಪರೀಕ್ಷೆ ಮುಗಿಸಿ ಬೇಸಿಗೆ ರಜೆಯನ್ನು ನೀಡುವಂತೆ ಒತ್ತಾಯಿಸಿದರು. ಇನ್ನೂ ಈ ಒಂದು ಪ್ರತಿಭಟನೆಯಲ್ಲಿ ರಾಜ್ಯ ಅದ್ಯಕ್ಷ ಅಶೋಕ ಸಜ್ಜನ್ ಕಾರ್ಯಾಧ್ಯಕ್ಷರಾದ ಶರಣಪ್ಪ ಗೌಡ ಆರ್.ಕೆ. ಗೌರವಾಧ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಉಪಾಧ್ಯಕ್ಷರಾದ ಗೋವಿಂದ ಜುಜಾರೆ ಸುರೇಶ ಅರಳಿ ಹಾಗೂ ಡಿ.ಟಿ.ಭಂಡಿವಡ್ಡರ ಜಿಲ್ಲಾಧ್ಯಕ್ಷರಾದ ಅಕ್ಬರಲಿ ಸೊಲ್ಲಾಪೂರ ಆನಂದ ದುಂದೂರ. ಎ.ಆಯ್.ಮುಳಗುಂದ.ಡಾ.ರಾಮುಮೂಲಗಿ. ಎಸ್.ಸಿ.ಹೊಳೆಯಣ್ಣವರ.ಕೆ.ಕೆ.ಚಿಪ್ಪಾಡಿ.ಬಿ.ಕೆ.ಹಾಲವರ.ಬಿ.ವಿ.ಅಂಗಡಿ ವಾಯ್.ಎಫ್.ಕೆಂಪಣ್ಣವರ ಬಿ.ಎಚ್.ಕಲ್ಲಣ್ಣವರ. ನಿಯೋಗದಲ್ಲಿ ಪಾಲ್ಗೊಂಡಿ ದ್ದರು