This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಯಶಸ್ವಿಯಾಯಿತು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿ ಯರ ಸಂಘದ ವೆಬಿನಾರ್ ರಾಜ್ಯ ಮಟ್ಟದ…..

WhatsApp Group Join Now
Telegram Group Join Now

ಧಾರವಾಡ –

ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ). ರಾಜ್ಯ ಘಟಕ ಧಾರವಾಡ ವತಿಯಿಂದ ನಡೆದ ರಾಜ್ಯ ಮಟ್ಟದ ವೆಬಿನಾರ ಮತ್ತು ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಒಂದು ಕಾರ್ಯಕ್ರಮಕ್ಕೆ ಕರ್ನಾಟಕದ ಮಹಿಳಾ ಮಾಣಿಕ್ಯರಲ್ಲಿ ಒಬ್ಬರಾದ ಧಾರವಾಡದ ಹೆಮ್ಮೆಯ ಕುವರಿ ದಕ್ಷ ಪ್ರಾಮಾಣಿಕ ಪೋಲೀಸ್ ಪೊಲೀಸ್ ಅಧಿಕಾರಿ(DYSP) ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಚಾಮರಾಜ ನಗರ ಇವರನ್ನು ಆಹ್ವಾನಿಸಲಾಗಿತ್ತು.

ಸಾಂಪ್ರದಾಯಿಕವಾಗಿ ಸದರಿ ಕಾರ್ಯಕ್ರಮವನ್ನು ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು ಪ್ರಾರ್ಥನೆಯನ್ನು ಶ್ರೀಮತಿ ನಂದಿನಿ ಯಾದವ್ ರವರು ನೆರವೇರಿಸಿದರು.ರಾಜ್ಯ ಪ್ರಧಾನ ಕಾರ್ಯದ ರ್ಶಿಗಳಾದ ಶ್ರೀಮತಿ ಜ್ಯೋತಿ H ರವರು ಎಲ್ಲರನ್ನು ಸ್ವಾಗತಿಸಿದರು.

ನಮ್ಮೆಲ್ಲರ ಮೆಚ್ಚಿನ ರಾಜ್ಯಾಧ್ಯಕ್ಷರಾದ ಡಾ ಲತಾ . ಎಸ್.ಮುಳ್ಳೂರ ಅವರು ಪ್ರಾಸ್ತಾವಿಕವಾಗಿ ಮಾತ ನಾಡಿದರು.ಶ್ರೀಮತಿ ಭುವನೇಶ್ವರಿ ಮೇಡಮ್ ರವರ ನಿರೂಪಣೆಯೊಂದಿಗೆ ವೆಬಿನಾರನ್ನು ಮುಂದುವರಿಸ ಲಾಯಿತು.ಮಂಜುಳಾ ನಂಜನಗೂಡು ಇವರು ಪ್ರಿಯದರ್ಶಿನಿ DYSP ಯವರ ಪರಿಚಯ ಮಾಡಿ ಕೊಟ್ಟರು.ನಂತರ DYSP ಅವರು ಹೆಣ್ಣಿನ ದೌರ್ಜನ್ಯ & ಪೋಲೀಸ್ ರಕ್ಷಣೆ (IPC) ನಿಯಮ ಗಳು ಈ ಕುರಿತು ಸುದೀರ್ಘವಾಗಿ 2 ಗಂಟೆಯವರೆಗೆ ಮನಮುಟ್ಟುವಂತೆ ಮಾಹಿತಿ ನೀಡಿದರು.

ಬಸವರತ್ನ, “ಶರಣ ಶ್ರೀ” ಪ್ರಶಸ್ತಿಗೆ ಭಾಜನರಾದ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ DYSP ಯವರು ವಚನ ಸಾಹಿತ್ಯ, ಕ್ರೀಡೆ, ಕರಾಟೆ, ಗಾಯನ, ಹಿಂದೂಸ್ತಾನಿ ಸಂಗೀತ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದ “ಸಕಲ ಕಲಾ ವಲ್ಲಭೆ”ಇವರು ಭಾವನಾ ಸಾಣಿಕೊಪ್ಪ ಶಿಕ್ಷಕಿಯರ ಹೆಮ್ಮೆಯ ಕುವರಿ ಎಂದು ಹೇಳಿಕೊಳ್ಳಲು ನಮ್ಮ ಶಿಕ್ಷಕಿಯರ ಬಳಗಕ್ಕೆ ಒಂದು ಹೆಮ್ಮೆಯ ಸಂಗತಿ.ಇಂದಿನ ವೆಬಿನಾರ್ ನಲ್ಲಿ ಪ್ರಿಯ ದರ್ಶಿನಿ DYSP ಮೇಡಮ್ ರವರು ಹೆಣ್ಣಿನ ದೌರ್ಜನ್ಯ & ಪೋಲೀಸ್ ರಕ್ಷಣೆ (IPC ನಿಯಮ ಗಳು) ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಹೆಣ್ಣು ದೌರ್ಜನ್ಯಕ್ಕೊಳಗಾಗದಂತೆ ಯಾವ ರೀತಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ದೌರ್ಜನ್ಯಕ್ಕೊಳಗಾದಾಗ ಯಾವ ರೀತಿ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯವನ್ನು ಪಡೆದುಕೊಳ್ಳಬೇಕು, ಹೆಣ್ಣಿನ ಶೋಷಣೆಯ ಕುರಿತು ನಮ್ಮ ಸಂವಿಧಾನ ದಲ್ಲಿ ಅಳವಡಿಸಲಾಗಿರುವ IPC ಸೆಕ್ಷನ್ ಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಎಲ್ಲಾ ಮಹಿಳೆ ಯರು ಸುರಕ್ಷಾ App ಹಾಗೂ SOS STAY SAFE App. (Safty App) ಡೌನ್ಲೋಡ್ ಮಾಡಿಕೊಳ್ಳಲು ತಿಳಿಸಿದರು.. ಈ ಆ್ಯಪ್ ಗಳು ಮತ್ತು helpline ಗಳು ಹೆಣ್ಣು ಮಕ್ಕಳು ತಮ್ಮ ಮೇಲೆ ದೌರ್ಜನ್ಯವಾ ದಾಗ ಬಹಳ ಸಹಾಯವಾಗುವುದು ಹಾಗೂ 1091…181…112 Women’s Help line ಬಗ್ಗೆ ಮಾಹಿತಿ ನೀಡಿದರು, ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ತಿಳಿಸಿದರು.ಒಟ್ಟಿನಲ್ಲಿ ಇಂದಿನ ವೇಬಿನಾರ್ ಮಹಿಳೆಯರಿಗೆ ಅತ್ಯಂತ ಉಪಯುಕ್ತವಾಗಿತ್ತು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ವಾದಾಗ ಮಹಿಳೆಯರ ಸುರಕ್ಷತೆಗಾಗಿ ಇರುವ IPC ನಿಯಮ ಗಳ ಬಗ್ಗೆ ಸುದೀರ್ಘವಾಗಿ 2 ಗಂಟೆಗಳ ವರೆಗೆ ಸವಿಸ್ತಾರವಾಗಿ ತಿಳಿಸಿದರು ಸಂವಾದ ಕಾರ್ಯಕ್ರಮ ದಲ್ಲಿ ಶಿಕ್ಷಕಿಯರು ಪ್ರಶ್ನಿಸಿದ ಪ್ರಶ್ನೆಗಳಿಗೆ, ಸಮಸ್ಯೆ ಗಳಿಗೆ ಸಮರ್ಪಕವಾಗಿ .ಸಮಾಧಾನದಿಂದ, ಉತ್ತರ ನೀಡಿದರು. ಕೊನೆಗೆ ಪರ್ವೀನ್ ಮೇಡಮ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಒಟ್ಟಾರೆ ಡಾ.ಲತಾ . ಮುಳ್ಳೂರ ಮೇಡಮ್ ಹಾಗೂ ಜ್ಯೋತಿ ಮೇಡಮ್ ರವರ ನೇತೃತ್ವದಲ್ಲಿ ಈ ವೆಬಿನಾರ ಹಾಗೂ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು??????? . ಈ ಒಂದು ವೇಬಿನಾರ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿ ಸಿದ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಜಿಲ್ಲಾ ಮಟ್ಟದ ಪದಾಧಿಕಾರಿಗಳು.ತಾಲೂಕು ಘಟಕದ ಪದಾಧಿಕಾರಿಗಳು .ಹಾಗೂ ಎಲ್ಲಾ ಶಿಕ್ಷಕ ವೃಂದಕ್ಕೆ ಪ್ರತ್ಯಕ್ಷ ವಾಗಿ ಪರೋಕ್ಷ ವಾಗಿ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಲಾಯಿತು


Google News

 

 

WhatsApp Group Join Now
Telegram Group Join Now
Suddi Sante Desk