ನವದೆಹಲಿ –
ನಾಳೆ ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ ಗೆ ಹೋರಾಟ ಮಾಡುತ್ತಿರುವ ರೈತರು ಕರೆ ಕೊಟ್ಟಿದ್ದಾರೆ. ನಾಳೆ (ಫೆಬ್ರವರಿ 6) ಹೆದ್ದಾರಿ ಬಂದ್ ಹೋರಾಟಕ್ಕೆ ಮುಂದಾಗಿದ್ದಾರೆ. ಅದರಂತೆ, ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ಕರೆ ನೀಡಿದ್ದಾರೆ.
ಇನ್ನು ದೆಹಲಿ ರೈತರ ಈ ಹೋರಾಟಕ್ಕೆ ರಾಜ್ಯ ರೈತ ಸಂಘಟನೆಗಳು ಸಾಥ್ ನೀಡಿದ್ದು, ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಾಳೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಂದ್ ಆಗಲಿವೆ.
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರು- ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿ ಬಂದ್ ನಡೆಯಲಿದ್ದು, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬೆಂಗಳೂರು- ಮೈಸೂರು ರೋಡ್ ಬಂದ್ ಆಗಲಿದೆ. ಇನ್ನು ಚಾಮರಸ ಮಾಲೀ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಅಸ್ಕಿ ಹಾಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದ್ದಾರೆ.
ನಾಳೆ ರಾಜ್ಯದ ಯಾವ್ಯಾವ ಮಾರ್ಗಗಳು ಬಂದ್ ಆಗಲಿವೆ…..
ಬೆಂಗಳೂರು-ಗೋವಾ ( ರಾಷ್ಟ್ರೀಯ ಹೆದ್ದಾರಿ), ಪೂನಾ-ಬೆಂಗಳೂರು (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು-ಮೈಸೂರು ( ರಾಜ್ಯ ಹೆದ್ದಾರಿ),ಬೆಂಗಳೂರು-ಹೈದರಾಬಾದ್ (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು-ಮಾಗಡಿ ರೋಡ್ ( ರಾಜ್ಯ ಹೆದ್ದಾರಿ), ಬೆಂಗಳೂರು-ಚೆನ್ನೈ (ರಾಷ್ಟ್ರೀಯ ಹೆದ್ದಾರಿ), ಬೆಂಗಳೂರು-ದೊಡ್ಡಬಳ್ಳಾಪುರ ( ರಾಜ್ಯ ಹೆದ್ದಾರಿ), ಬೆಂಗಳೂರು-ಚಾಮರಾಜನಗರ್ ( ರಾಜ್ಯ ಹೆದ್ದಾರಿ), ಬೆಂಗಳೂರು-ಶಿವಮೊಗ್ಗ ( ರಾಜ್ಯ ಹೆದ್ದಾರಿ)
ಹೀಗೆ ನಾಳೆ ರಾಜ್ಯದ ಹೆದ್ದಾರಿಯಲ್ಲಿ ಬಂದ್ ನಡೆಯಲಿದ್ದು ನಿವೇನಾದರೂ ಪ್ರವಾಸ ಕೈಗೊಂಡಿದ್ದರೆ ಪ್ಲಾನ್ ಮಾಡಿಕೊಂಡು ಹೊರಡಿ.