ಹುಬ್ಬಳ್ಳಿ –
ಕೋವಿಡ್ ನಿಂದ ಮೃತರಾದ ಶಿಕ್ಷಕರ ಕುಟುಂಬಕ್ಕೆ ೧ ಕೋಟಿ ರೂ.ಪರಿಹಾರ ನೀಡಬೇಕು ಕೊರೋನಾ ಕರ್ತವ್ಯ ನಿಯೋಜನೆ ರದ್ದುಪಡಿಸಬೇಕು ಹೌದು ಈಗಾಗಲೇ ಕರ್ನಾಟಕ ಘನ ಸರ್ಕಾರದ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ ಎಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ರಾದ ಅನ್ಬುಕುಮಾರ ರವರು ಕೋವಿಡ್ ಕುರಿತಂತೆ ಕಾರ್ಯನಿರತರಾಗಿರುವ ಮತ್ತು ಕೋವಿಡ್ ಖಾಯಿಲೆಯಿಂದ ಮೃತಪಟ್ಟವರ ಪ್ರಸ್ತಾವನೆಗಳನ್ನು ಕಲೆಹಾಕಲು ಆದೇಶಿಸಿರುವು ದನ್ನು ನಮ್ಮ ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಸ್ವಾಗತಿ ಸುತ್ತದೆ.ಪ್ರಸ್ತಾವನೆಗಳನ್ನು ಕಲೆಹಾಕಿ ಮುಂದಿನ ಕ್ರಮ ಜರುಗಿಸುವ ಪೂರ್ವದಲ್ಲಿಯೇ ಸನ್ಮಾನ್ಯ ಮುಖ್ಯಮಂತ್ರಿಗಳು ಕೊರೊನಾದಿಂದ ಮೃತಪಟ್ಟವರಿಗೆ ತಕ್ಷಣದಿಂದಲೇ 1 ಕೋಟಿ ರೂಪಾಯಿಯನ್ನುಘೋಷಿಸಬೇಕು .ಘೋಷಿಸದೇ ಆದಲ್ಲಿ ಆ ಮೃತಪಟ್ಟ ಕುಟುಂಬದ ವರು ಗೋಳು ಕಣ್ಣೀರಿನಲ್ಲಿ ಕೈತೊಳೆಯುವುದು ತಪ್ಪುವುದಿಲ್ಲ.ಅವರನ್ನು ಕಣ್ಣೀರಿನಲ್ಲಿ ಕೈತೊಳೆಯುವ ದುಃಖದ ಸಾಗರದಲ್ಲಿ ಮುಳುಗಿಸುವ ಬದಲಾಗಿ ಈ ಕ್ಷಣಕ್ಕೆ 1ಕೋಟಿ ರೂಪಾಯಿ ಮಂಜೂರು ಮಾಡಬೇಕು.ಇಲ್ಲವೆಂದರೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ರವರು ಮನೆಯಿಂದಲೇ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಸರಕಾರಕ್ಕೆ ಒತ್ತಾಯಿಸಿದ್ದಾರೆ

ಕೊರೋನಾ ಕರ್ತವ್ಯಕ್ಕೆ ನಿಯುಕ್ತಿಗೊಂಡ ಶಿಕ್ಷಕರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಏಕೆಂದರೆ ನಾಳೆ ನಾವುಗಳು ತರಗತಿಗಳಲ್ಲಿ ಮಕ್ಕಳ ಎದುರುಗಡೆ ನಿಲ್ಲಬೇಕು,ಸೋಂಕಿತರಾದ ಯಾವುದೇ ಶಿಕ್ಷಕರಿಗೆ ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ದಾಖಲಿಕೊಳ್ಳಲು ನಿರಾಕರಿಸದೇ ತಕ್ಷಣದಲ್ಲಿಯೇ ದಾಖಲಿಸಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಬೇಕು

ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಸಜ್ಜನ ಪ್ರಧಾನ ಕಾರ್ಯದರ್ಶಿಗಳಾದ ,ಗೌರವಾಧ್ಯಕ್ಷರಾದ ಕೋಶಾಧ್ಯಕ್ಷರಾದ ಎಸ್ ಎಫ್ ಪಾಟೀಲ್ ಕಾರ್ಯಾ ಧ್ಯಕ್ಷರಾದ ಶರಣಪ್ಪ ಗೌಡ ಆರ್ ಕೆ ಮಹಾಪೋಷಕ ರಾದ ಪವಾಡಪ್ಪ ಕಾಂಬ್ಳೆ ಉಪಾಧ್ಯಕ್ಷರುಗಳಾದ ಗೋವಿಂದ ಜುಜಾರೆ ಹನುಮಂತಪ್ಪ ಮೇಟಿ. ಡಿ. ಎಸ್ ಭಜಂತ್ರಿ. ಕುಕನೂರ.ರಾಮಪ್ಪ ಹಂಡಿ .ಎಮ್ ಆಯ್ ಮುನವಳ್ಳಿ ಮಹ್ಮದ್ ರಫಿ .ಡಿ ಟಿ ಬಂಡಿವ ಡ್ಡರ ಶರಣಬಸವ ಬನ್ನಿಗೋಳ.ಎಂ.ವಿ ಕುಸುಮಾ. ರಾಜಶ್ರೀ ಪ್ರಭಾಕರ್ ಜಿ ಟಿ ಲಕ್ಷ್ಮೀದೇವಮ್ಮ ಕಲ್ಪನಾ ಚಂದನಕರ. ರವಿ ಬಂಗೆನ್ನವರ ಶಿವರಡ್ಡಿ ಅಶೋಕ. ಬಿಸೆರೊಟ್ಟಿ ನಾಗರಾಜ್ ಆತಡಕರ ನಾಗರಾಜ್ ಕೆ .ರೇಖಾ ದೇವಿ ದೇವಿಕಾ ಕಮ್ಮಾರ ಮುಂತಾದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.