ಹುಬ್ಬಳ್ಳಿ –
ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇನ್ನೂ ಮುಂದೆ ಯುವಕರ ಕೈಯಲ್ಲಿ ಎಂದು ಸಂಘದ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಹೇಳಿದರು. ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಕೇವಲ ಹತ್ತು ರೂಪಾಯಿ ವಾರ್ಷಿಕ ಸದಸ್ಯತ್ವವನ್ನು ಪಡೆದುಕೊಂಡು ಈಗಾ ಗಲೇ ರಾಜ್ಯದ 28 ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಮತ್ತು ಎರಡು ನೂರಕ್ಕೂ ಅಧಿಕ ತಾಲ್ಲೂಕು ಘಟಕಗಳನ್ನು ಹೊಂದಿದೆ.
ಈ ಸಂಘವನ್ನು ಹುಟ್ಟು ಹಾಕಿದವರಲ್ಲಿ ಗೋವಿಂದ ಜುಜಾರೆ,ಡಿ ಟಿ ಬಂಡಿವಡ್ಡರ್ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಶರಣಪ್ಪಗೌಡ ಕೆಂಚಮ್ಮನವರ, ಹನುಮಂತಪ್ಪ ಮೇಟಿ, ಎಂ ಐ ಮುನವಳ್ಳಿ ಎಸ್ ಎಫ್ ಪಾಟೀಲ ಪವಾಡೆಪ್ಪ ಕಾಂಬಳೆ ಮುಂತಾದ ಘಟಾನುಘಟಿ ನಾಯಕರು ಇದರಲ್ಲಿ ರಾಜ್ಯಾದ್ಯಕ್ಷ ಸೇರಿ ಬಹುತೇಕ ಹಿರಿಯರು ನಿವೃತ್ತಿ ಅಂಚಿನಲ್ಲಿ ಇರುತ್ತಾರೆ.
ಆದ್ದರಿಂದ ಸಂಘವನ್ನು ಮುಂದಿನ ದಿನಗಳಲ್ಲಿ ಮುನ್ನಡೆಸಲು ಕ್ರಿಯಾಶೀಲ ಯುವಕರ ಕೈಯಲ್ಲಿ ಕೊಡುವ ಆಲೋಚನೆಯನ್ನು ಮಾಡಿದ್ದು ಇದು ಒಳ್ಳೆಯ ಬೆಳವಣಿಗೆ ಎಂದು ಹಿರಿಯ ಉಪಾದ್ಯಕ್ಷ ಗೋವಿಂದ ಜುಜಾರೆ ತಿಳಿಸಿದರು.