ಶಿಕ್ಷಣ ಇಲಾಖೆಯ ರತ್ನ ಧಾರವಾಡ ಗ್ರಾಮೀಣ BEO ಉಮೇಶ ಬಮ್ಮಕ್ಕನವರ ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನ ಹೇಳಿಕೆ…..

Suddi Sante Desk

ಧಾರವಾಡ –

ಧಾರವಾಡ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಶಿಕ್ಷಣ ಇಲಾಖೆಯ, ರತ್ನ ಇದ್ದಂತೆ ಎಂದು ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನ ತಿಳಿಸಿದರು, ಅವರು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಯಲ್ಲಿ ಜರುಗಿದ ವೀರೇಶ ಅರಕೇರಿ ಅವರ ಮೊದಲ ದತ್ತಿ ನಿಧಿ ಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬಿಇಒ ಉಮೇಶ ಬಮ್ಮಕ್ಕನವರ ಒಬ್ಬ ಶ್ರೇಷ್ಠ ಶಿಕ್ಷಣಾಧಿಕಾರಿ ಎಂದರು.

ಕರೋನದ ಸಂದರ್ಭದಲ್ಲಿ ಮಕ್ಕಳ ಕಲಿಕೆ ಕುಂಟಿತ ಆಗಬಾರದು ಎಂಬ ಸದುದ್ದೇಶದಿಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೂಲಕ ಮಕ್ಕಳಿಗೆ ಕಲಿಕೆಯನ್ನು ಉತ್ತೇಜಿಸುವ ಸಲುವಾಗಿ ಪುಸ್ತಕ ಜೋಳಿಗೆ ಯ ಮೂಲಕ ದಾನಿಗಳಿಂದ ಪುಸ್ತಕಗಳನ್ನು ಸಂಗ್ರಹಿಸಿ ನೀಡಿರುವುದು ಇಡೀ ನಾಡಿನಾದ್ಯಂತ ಜನಮನ್ನಣೆ ಗಳಿಸಿತು ಇಂತಹ ಸಮಾಜಮುಖಿ ಬಿಇಒ ನಮ್ಮ ತಾಲೂ ಕಿಗೆ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಲೂಸಿ ಸಾಲ್ಡಾನ ತಿಳಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ,ವೀರಪ್ಪ ಅರಕೇರಿ ಹುಬ್ಬಳ್ಳಿಯ ಒಬ್ಬ ಇಂಜಿನಿಯರ್ ಆಗಿ ಅವರು ತಮ್ಮ ಕಾಯಕದ ಜೊತೆಗೆ ಪ್ಲಾಸ್ಟಿಕನ್ನು ಅತಿಯಾಗಿ ಬಳಸುವು ದನ್ನು ತಪ್ಪಿಸಲು ಆ ಪ್ಲಾಸ್ಟಿಕ್ ರಸ್ತೆಯಲ್ಲಿ ಚೆಲ್ಲುವುದರ ಮೂಲಕ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾ ಮಗಳ ಕುರಿತು ಮಹಿಳೆಯರಿಗೆ ಜಾಗ್ರತೆ ಮೂಡಿಸಿ‌ ಆ ವೇಸ್ಟ ಪ್ಲಾಸ್ಟಿಕ್ ಮತ್ತು ವೇಸ್ಟ ಹಾಳೆಗಳನ್ನು ರಸ್ತೆಗೆ ಎಸೆಯದೇ ನಿಮ್ಮ ನಿಮ್ಮ ಮನೆಗಳಲ್ಲಿ ಅದನ್ನು ಕೂಡಿಸಿಡಿ, ಅದನ್ನು ನಾನು ತೆಗೆದುಕೊಂಡು ಹೋಗುವೆ ಅಂತ ಮಹಿಳೆಯರ ಮನಸ್ಸು ಒಲಿಸಿ ಆ ಸಂಗ್ರಹಿಸಿದ ವೇಸ್ಟ ಪ್ಲಾಸ್ಟಿಕ್ ಮತ್ತು ಈ ವೇಸ್ಟಗಳನ್ನು ಪುನರ್ ಬಳಕೆಯ ಕಾರ್ಖಾನೆಗಳಿಗೆ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪ್ರದಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳ ಕೇರ್ ಫಂಡಗೆ ಚೆಕ್ ಮೂಲಕ ಕಳಿಸುತ್ತಿರುವುದು ಅತ್ಯಂತ ವಿಶಿಷ್ಟ ಸಮಾಜಸೇವಕ ಎಂದು ವೀರೇಶ ಅರಕೇರಿ ಅವರನ್ನು ಮುಕ್ತ ಕಂಠದಿಂದ ಹೊಗಳಿದರು

2021-22 ನೆಯ ಸಾಲಿನಲ್ಲಿ ಕೂಡಿಸಿದ ಹಣವನ್ನು ಸರಕಾರಿ ಶಾಲೆಯ ಮಕ್ಕಳಿಗೆ ದತ್ತಿ ನೀಡುವ ಮೂಲಕ ಒಬ್ಬ ಆದರ್ಶ ಹಾಗೂ ಶ್ರೇಷ್ಠ ಪರಿಸರವಾದಿ ಎಂದು ಮುಕ್ತಕಂಠ ದಿಂದ ಕೊಂಡಾಡಿದರು ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾ ಸಾಬ ದೊಡಮನಿ ಲೂಸಿ ಸಾಲ್ಡಾನ ಅವರಿಂದ ಅಕ್ಷರದ ಬೆಳಕು ಕಂಡ ಸಾವಿರಾರು ವಿದ್ಯಾರ್ಥಿಗಳ ಪೈಕಿ ನಾನು ಸಹ ಒಬ್ಬನಾಗಿದ್ದು ನಮಗೆ ಅವರು ಜೀವನದ ಶಿಕ್ಷಣವನ್ನು ನೀಡಿ ಬದುಕು ಕಟ್ಟಿ ಕೊಟ್ಟಿದ್ದಾರೆ ನಾನು ಯಾವುದೇ ಆಶೆ ಆಮೀಶವಿಲ್ಲದೇ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕೆಗೆ ಶಿರಸಾವಹಿಸಿ ಕೆಲಸ ಮಾಡುವೆ ಎಂದರು ಗ್ರಾಮ ಪಂಚಾಯತಿ ಉಪಾದ್ಯಕ್ಷರಾದ ವಿಠ್ಠಲ ಇಂಗಳೆ ಸದಸ್ಯ ರಾದ ಮಂಜುನಾಥ ಭೀಮಕ್ಕನವರ,ಸಿದ್ದಣ್ಣ ಕುಂಬಾರ, ಮಂಜುನಾಥ ವಾಸಂಬಿ,ಕಿರುತೆರೆಯ ನಟಿ ಅನ್ನಪೂರ್ಣ ಉಂಡಿ ಸ್ಥಳೀಯ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ಅದ್ಯಕ್ಷರುಗಳಾದ ಸುರೇಶ ಸುಣಗಾರ ಈರಣ್ಣ ತಟ್ಟಿಮನಿ, ಇಮಾಮಸಾಬ ಕೊಣ್ಣೂರ, ಸಿ ಆರ್ ಪಿ ಗಳಾದ ವಿ ಎನ್ ಕೀರ್ತಿವತಿ,ತೆಹಸೀನಬಾನು ಸೌಧಾ ಗರ,ರುದ್ರೇಶ ಕುರ್ಲಿ,ಮೆಹಬೂಬ್ ಸುಬಾನಿ ಮುಲ್ಲಾನ ವರ, ಸಮಾಜ ಸೇವಕರುಗಳಾದ ಶರಣು ಸಾಲಿ, ಮೌಲಾ ಸಾಬ ಸವಣೂರು,ಗುರಪ್ಪ ಚಿಲಕವಾಡ, ಹಸೀನ ಸಮುದ್ರಿ, ಎಂ ಆರ್ ಪಾಲ್ತಿ, ಆಯೇಶಾ ಎಲಿಗಾರ,ಹಾಜರಾ ಎಲಿಗಾರ ಶಾಹೀನ ಎಲಿಗಾರ, ಇಮಾಮಬಿ ಗುಡಸಲಮನಿ, ರಫೀಕ ಭಾಗವಾನ ರಾಜೇಸಾಬ ನವಲಗುಂದ, ರಾಜೀವ ಹಲವಾ ಯಿ,ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಮುಂತಾದವರು ಹಾಜರಿದ್ದರು,ಎಲ್ ಐ ಲಕ್ಕಮ್ಮನವರ ಸ್ವಾಗತಿಸಿದರು, ನಂದಕುಮಾರ ದ್ಯಾಪೂರ ನಿರೂಪಿಸಿದರು, ಕೆ ಎಂ ಶಿವಳ್ಳಿ ವಂದಿಸಿದರು, ಇದೇ ಸಂದರ್ಭದಲ್ಲಿ ಬಿಇಒ ಉಮೇಶ ಬಮ್ಮಕ್ಕನವರ ಅವರನ್ನು ಶಾಲೆಯ ವತಿಯಿಂದ ಸತ್ಕರಿಸ ಲಾಯಿತು ಹುಬ್ಬಳ್ಳಿಯ ಇಂಜಿನಿಯರ್ ವೇಸ್ಟ ಪ್ಲಾಸ್ಟಿಕ್, ಈ ಪೇಪರ್ ಇತ್ಯಾದಿ ಸಂಗ್ರಹಿಸಿಅದನ್ನು ಪುನರ್ ಬಳಕೆಯ ಕಾರ್ಖಾನೆಗೆ ನೀಡಿ ಅದರಿಂದ ಬಂದ ಒಂದು ವರ್ಷದ (2021-22 ನೆಯ ಸಾಲಿನ) ಹಣವನ್ನು ಹತ್ತು ಸಾವಿರ ರೂಪಾಯಿಗಳ ಚೆಕ್ಕನ್ನು, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಮೂಲಕ ಶಾಲಾಭಿವೃದ್ದಿ ಹಾಗೂ ಮೇಲು ಸ್ತುವಾರಿ ಸಮಿತಿಯ ಅದ್ಯಕ್ಷರಾದ ಮೌಲಾಸಾಬ ದೊಡ ಮನಿ ಮುಖ್ಯ ಶಿಕ್ಷಕಿ ಬಿ ಎಂ ಸುತಾರ ಇವರಿಗೆ ಹಸ್ತಾಂತರಿಸಿ ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.