ಧಾರವಾಡ –
ಧಾರವಾಡದ ಸೈದಾಪೂರದ ಮೆಹಬೂಬ್ ನಗರ ದಲ್ಲಿ ಕಳೆದ ಎರಡು ದಿನಗಳಿಂದ ಬೀದಿ ದೀಪಗಳು ಹಾಗೇ ಉರಿಯುತ್ತಿವೆ.ಆನ್ ಮಾಡಿದ ವಿದ್ಯುತ್ ದೀಪಗಳು ಹಾಗೇ ಹತ್ತಿಕೊಂಡು ಹಗಲು ರಾತ್ರಿ ಎನ್ನ ದೇ ಎರಡು ದಿನಗಳಿಂದ ನಿರಂತರವಾಗಿ ಉರಿಯು ತ್ತಿದೆ.

ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಆನ್ ಮಾಡಿದ ಮೇಲೆ ಬೆಳಗಾಗುತ್ತಿದ್ದಂತೆ ಬಂದ್ ಮಾಡಬೇಕು ಆದರೆ ಎರಡು ದಿನಗಳಿಂದ ಆನ್ ಮಾಡಿದ ಲೈಟ್ ಗಳನ್ನು ಆಪ್ ಮಾಡಿಲ್ಲ ಹೀಗಾಗಿ ಸಾರ್ವಜನಿಕು ಈ ಒಂದು ವ್ಯವಸ್ಥೆಯ ವಿರುದ್ದ ಮತ್ತು ಹೆಸ್ಕಾಂ ನ ಬೇಜವಾಬ್ದಾರಿ ವಿರುದ್ದ ಅಸಮಾ ಧಾನವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಮುಖ್ಯ ರಸ್ತೆಯಲ್ಲಿನ ಬಹುತೇಕ ವಿದ್ಯುತ್ ದೀಪಗಳು ಹೆಚ್ಚಿನ ಪ್ರಮಾಣದಲ್ಲಿ ಹತ್ತಿದ್ದು ಹಾಗೇ ಇನ್ನೂ ಈಗಲೂ ಉರಿಯುತ್ತಿವೆ.ಈ ಕುರಿತಂತೆ ಇಲ್ಲಿನ ಸಾರ್ವಜನಿಕರು ಹೆಸ್ಕಾಂ ನವರ ಗಮನಕ್ಕೆ ತಗೆದುಕೊಂಡು ಬಂದಿದ್ದಾರೆ ಆದರೂ ಕೂಡಾ ಯಾರು ಸ್ಪಂದಿಸಿಲ್ಲ.

ಹೀಗಾಗಿ ಇನ್ನಾದರೂ ಎಚ್ಚೇತ್ತುಕೊಂಡು ಉರಿಯು ತ್ತಿರುವ ವಿದ್ಯುತ್ ದೀಪಗಳನ್ನು ಬಂದ್ ಮಾಡತಾರೆ

ಇಂಧನ ಉಳಿಸಿ ಉಳಿತಾಯ ಮಾಡಿ ಎಂದು ಸಂದೇಶ ಹೇಳುತ್ತಿರುವ ಹೆಸ್ಕಾಂ ನವರು ಎಚ್ಚೆತ್ತು ಕೊಳ್ಳುತ್ತಾರೆನಾ ಕಾದು ನೋಡಬೇಕು.