ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರು ತ್ತಿದೆ.ಹೊಸ ಕನಸು ಹೊಸ ಯೋಜನೆ ಅಭಿವೃದ್ದಿಯ ಉತ್ಸಾಹದೊಂದಿಗೆ ಧಾರವಾಡದ 4 ನೇ ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಯಾಗಿ ರಾಕೇಶ್ ದೊಡಮನಿ ಸ್ಪರ್ಧೆ ಮಾಡಿದ್ದಾರೆ

ಈಗಾಗಲೇ ಕಳೆದ 17 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಇದ್ದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಆದರೆ ಟಿಕೆಟ್ ನ್ನು ಕೊನೆಯ ಘಳಿಗೆಯಲ್ಲಿ ತಪ್ಪಿಸಿದ್ದು ಹೀಗಾಗಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ್ದಾರೆ

ವಾರ್ಡ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನಪ್ರಿಯತೆ ಹೊಂದಿರುವ ಇವರು ಸಧ್ಯ ಪಕ್ಷೇತರ ಅಭ್ಯರ್ಥಿ ಯಾಗಿ ರಾಕೇಶ್ ದೊಡಮನಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.

ಹತ್ತಾರ ಹೊಸ ಹೊಸ ಕನಸು ಭರವಸೆಯೊಂದಿಗೆ ಮಾದರಿ ವಾರ್ಡ್ ನ್ನಾಗಿ ಮಾಡುವ ಕನಸಿನೊಂದಿಗೆ ಅಖಾಡಕ್ಕಿಳಿದರುವ ರಾಕೇಶ್ ದೊಡಮನಿ ಅವರಿಗೆ ವಾರ್ಡ್ ನಲ್ಲಿ ಅಭೂತಪೂರ್ಣವಾದ ಬೆಂಬಲ ಕಂಡು ಬರುತ್ತಿದೆ.

ಪ್ರೀತಿ ವಿಶ್ವಾಸದಿಂದ ತಾವಾಗಿಯೇ ಇವರ ಬೆನ್ನಿಗೆ ನಿಂತುಕೊಂಡಿದ್ದು ಇಂದು ವಾರ್ಡ್ ನಂಬರ್ ನಾಲ್ಕರ ಮೋರೆ ಪ್ಲಾಟ್ ಹಾಗೂ ಮಹಾಂತ ನಗರ ಮತದಾರ ರಿಗೆ ಹೋಗಿ ಮತ ಬಾಂಧವರಲ್ಲಿ ಮತಯಾಚನೆ ಮಾಡಲಾಯಿತು ಇದರೊಂದಿಗೆ ವಿನಂತಿಸಲಾಯಿತು

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಯ ನಡುವೆ ಅಬ್ಬರ ದ ಪ್ರಚಾರವನ್ನು ಮಾಡುತ್ತಿದ್ದಾರೆ.ಯುವ ಟೀಮ್ ಮತ್ತು ವಾರ್ಡ್ ನ ಗುರು ಹಿರಿಯರು ಮತ್ತು ಮುಖಂ ಡರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡುತ್ತಿದ್ದಾರೆ.

ಇನ್ನೂ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಹೋಗುತ್ತಿದ್ದಂತೆ ಮತದಾರರಿಂದ ಅಭೂತಪೂರವಾದ ಬೆಂಬಲ ಅಕ್ಕರೆಯ ಮಾತು ಗಳು ಕೇಳಿ ಬರುತ್ತಿದ್ದು ಬದಲಾವಣೆ ಬಯಸಿರುವ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಮಾತನ್ನು ಹೇಳುತ್ತಿ ದ್ದಾರೆ.ಇದೇ ಉತ್ಸಾಹದಲ್ಲಿ ಇವರು ಕೂಡಾ ಎಲ್ಲರೊಂದಿಗೆ ತೆರಳಿ ವಾರ್ಡ್ ನಲ್ಲಿ ಬಿಡುವಿಲ್ಲದೇ ಪ್ರಚಾರವನ್ನು ಮಾಡುತ್ತಿದ್ದಾರೆ.























