ವಡಗೇರಾ –
ಹತ್ರು ಗಂಟೆಯಾದರೂ ಆದರೂ ಓಪನ್ ಆಗದ ಶಾಲೆ ಗೇಟ್ ಹತ್ತಿ ಜಿಗಿದ ವಿದ್ಯಾರ್ಥಿಗಳು – ಪುಸ್ತಕದ ಬ್ಯಾಗ್ ಜೊತೆಗೆ ಗೇಟ್ ಜಿಗಿದ ವಿದ್ಯಾರ್ಥಿಗಳು ಪೋಷಕರ ಆಕ್ರೋಶ ಹೌದು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು 10 ಗಂಟೆಯಾದರೂ ಶಾಲೆಯ ಗೇಟ್ ತೆಗೆಯದೆ ಇರುವುದರಿಂದ ಗೇಟ್ ಹತ್ತಿ ಶಾಲೆಯ ಒಳಗಡೆ ಹೋದ ಪ್ರಸಂಗ ನಡೆದಿದೆ
ಎಂದಿನಂತೆ ಶಾಲಾ ಮಕ್ಕಳು ಶುಕ್ರವಾರ ಸುಮಾರು 9.15 ಕ್ಕೆ ಶಾಲೆಗೆ ಬಂದಿದ್ದಾರೆ.10 ಗಂಟೆಯಾದರೂ ಶಾಲೆಗೆ ಶಿಕ್ಷಕರು ಬಾರದೆ ಇರುವದರಿಂದ ಹಾಗೂ ಶಾಲೆಯ ಗೇಟ್ ತೆಗೆಯದೆ ಇರುವುದರಿಂದ ಶಾಲಾ ಮಕ್ಕಳು ತಮ್ಮ ಪುಸ್ತಕದ ಬ್ಯಾಗ್ ಜತೆ ಶಾಲೆಯ ಗೇಟ್ ಹತ್ತಿ ಶಾಲೆಯ ಒಳಗಡೆ ಹೋಗಿದ್ದಾರೆ.
ಈ ರೀತಿ ಗೇಟ್ ಹತ್ತಿ ಇಳಿಯುವಾಗ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೋಣೆ ಎಂದು ಪಾಲಕರು ಪ್ರಶ್ನೆ ಮಾಡುತಿದ್ದಾರೆ. ಶಾಲೆಯಲ್ಲಿ ಸೂಕ್ತ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಮಧ್ಯಾಹ್ನದ ಬಿಸಿ ಊಟ, ಮೊಟ್ಟೆಗಳನ್ನು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ವಿತರಿಸದೆ ಈ ಶಾಲೆಯ ಶಿಕ್ಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪೋಷಕರು ದೂರುತ್ತಾರೆ.
ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ ಒಟ್ಟು 193 ವಿದ್ಯಾರ್ಥಿಗಳು ಇದ್ದಾರೆ. 3 ಜನ ಕಾಯಂ ಶಿಕ್ಷಕರು ಹಾಗೂ 4 ಜನ ಅತಿಥಿ ಶಿಕ್ಷಕರು ಇದ್ದಾರೆ ನಿತ್ಯ ಮುಖ್ಯ ಶಿಕ್ಷಕ ತಡವಾಗಿ ಬರುತ್ತಾರೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಗೇಟ್ ಹತ್ತಿ ಒಳಗಡೆ ಹೋಗಬೇಕು. ಇಲ್ಲವೇ ಶಾಲೆಯ ಹೊರಗಡೆ ನಿಲ್ಲಬೇಕು ಮುದುಕಪ್ಪ ಮುಖ್ಯಶಿಕ್ಷಕನಿತ್ಯ 9 ಗಂಟೆಗೆ ಶಾಲೆಯ ಗೇಟ್ ತೆರೆಯ ಲಾಗುತ್ತದೆ. ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕಾರ್ಯಕ್ಕೆ ಸೇರಿ ಮೂರು ಜನ ಶಿಕ್ಷಕರು ಹೋಗಿದ್ದರಿಂದ ಶಾಲೆಯಲ್ಲಿ ಅತಿಥಿ ಶಿಕ್ಷಕರು ಇದ್ದಿದ್ದು ಇಲಾಖೆಯ ಅಧಿಕಾರಿಗಳು ತಡವಾಗಿ ಬರುವ ಶಿಕ್ಷಕರ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬೊಂದನ್ನು ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ವಡಗೇರಾ…..