ಧಾರವಾಡ –
ಬೆಳ್ಳಂ ಬೆಳಿಗ್ಗೆ ಧಾರವಾಡದ ಎನ್ ಟಿಟಿಎಫ್ ಬಳಿ ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಭಾಷಚಂದ್ರ ವಿಠ್ಠಲ ಶೆಟ್ಟಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ನಗರದ ಯಾಲಕ್ಕಿ ಶೆಟ್ಟರ ಕಾಲೊನಿಯ ನಿವಾಸಿ ಯಾಗಿರುವ ಇವರು ನಗರದ ಲೈನ್ ಬಜಾರ್ ನಲ್ಲಿ ದುರ್ಗಾ ಮಿಲ್ಕ್ ಪಾರ್ಲರ್ ಇಟ್ಟುಕೊಂಡಿದ್ದರು. ಎಂದಿನಂತೆ ಇಂದು ಬೆಳಿಗ್ಗೆ ಹಾಲನ್ನು ಮನೆ ಮನೆಗೆ ವಿತರಣೆ ಮಾಡಿ ಇನ್ನೇನು ಮನೆಯತ್ತ ಹೊರಟಿದ್ದ ಸಮಯದಲ್ಲಿ NTTF ಬಳಿ ಏಕಾಎಕಿಯಾಗಿ ಬಂದ ಕಾರೊಂದು ಸ್ಕೂಟಿ ಗೆ ಡಿಕ್ಕಿಯಾಗಿದೆ.

ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ನಂತರ ಕಿಮ್ಸ್ ಗೆ ಶಿಪ್ಟ್ ಮಾಡಲಾಯಿತು. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸುಭಾಷ್ ಚಂದ್ರ ಅವರಿಗೆ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಇನ್ನೂ ಈ ಕುರಿತಂತೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈಗಾಗಲೇ ಕಾರನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.