ಶಿಕ್ಷಕರ ವರ್ಗಾವಣೆ ಪ್ರಾರಂಭಿಸಲು ಒತ್ತಾಯ – ಜಗದೀಶ್ ಶೆಟ್ಟರ್ ಗೆ ಮುತ್ತಿಗೆ ಮನವಿ ಸಲ್ಲಿಕೆ…..

Suddi Sante Desk

ಹುಬ್ಬಳ್ಳಿ –

ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾ ವಣೆಯನ್ನು ಪುನಃ ಪ್ರಾರಂಭ ಮಾಡುವಂತೆ ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಶಿಕ್ಷಕರು ಜಗದೀಶ್ ಶೆಟ್ಟರ್ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ನಗರದ ಜಗದೀಶ್ ಶೆಟ್ಟರ್ ನಿವಾಸಕ್ಕೆ ಮುತ್ತಿಗೆ ಹಾಕಿದ ಶಿಕ್ಷಕರು ಕಳೆದ ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ವರ್ಗಾವಣೆ ಪ್ರಕ್ರಿಯೆಯನ್ನು ಪುನಃ ಪ್ರಾರಂಭಿಸುವಂತೆ ಒತ್ತಾಯವನ್ನು ಮಾಡಿದರು.‌

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ನೇತೃತ್ವದಲ್ಲಿ ಈ ಒಂದು ಪ್ರತಿಭಟನೆಯನ್ನು ಮಾಡಲಾಯಿತು. ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಗೆ ಮನವಿ ಸಲ್ಲಿಸಿ ದ ಶಿಕ್ಷಕರು ಕೂಡಲೇ ಶಿಕ್ಷಕರ ವರ್ಗಾವಣೆ ಯನ್ನು ಆರಂಭಿಸುವಂತೆ ಒತ್ತಾಯವನ್ನು ಮಾಡಿದರು.

ರಾಜ್ಯಾಧ್ಯಕ್ಷ ಅಶೋಕ ಸಜ್ಜನರ ನೇತೃತ್ವದಲ್ಲಿ ನಡೆದ ಈ ಒಂದು ಪ್ರತಿಭಟನೆಯಲ್ಲಿ ಸಂಘದ ಸರ್ವ ಸದಸ್ಯರು ಶಿಕ್ಷಕ ಬಂಧುಗಳಾದ ಎಲ್ ಐ ಲಕ್ಕಮ್ಮ ನವರ,ಸೇರಿದಂತೆ ಐವತ್ತಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.