ಧಾರವಾಡ ಜನತೆಗೆ ದೊಡ್ಡ ತಲೆನೋವಾಗಿದ್ದ ಚೈನ್ ಸ್ನ್ಯಾಚಿಂಗ್ ಖದೀಮರನ್ನು ಬಂಧನ ಮಾಡಿದ ಉಪನಗರ ಪೊಲೀಸರು  ಜಂಟಿ ಕಾರ್ಯಾಚರಣೆ ಮಾಡಿ ಅಂತರಾಜ್ಯದಲ್ಲಿ ಕುಳಿತುಕೊಂಡಿದ್ದ ವರನ್ನು ಹಿಡದು ತಂದ ಪೊಲೀಸರು

Suddi Sante Desk

ಧಾರವಾಡ –

ಕಳೆದ ಹದಿನೈದು ದಿನಗಳಿಂದ ಹುಬ್ಬಳ್ಳಿ ಧಾರವಾಡ ಅದರಲ್ಲೂ ಧಾರವಾಡ ಜನತೆಗೆ ದೊಡ್ಡ ತಲೆನೋವಾಗಿದ್ದ ಚೈನ್ ಸ್ನ್ಯಾಚಿಂಗ್ ಪ್ರಕರಣವನ್ನು ಧಾರವಾಡ ಉಪನಗರ ಮತ್ತು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ.ಹೌದು ಒಂದೇ ದಿನ ಮೂರು ನಾಲ್ಕು ದಿನಗಳ ಅಂತರದಲ್ಲಿ ಸರಣಿಯಾಗಿ ನಡೆದ ಈ ಒಂದು ಚೈನ್ ಸ್ನ್ಯಾಚಿಂಗ್ ಪ್ರಕರಣಗಳನ್ನು ಕೊನೆಗೂ ಪೊಲೀಸರು ಭರ್ಜರಿಯಾಗಿ ಕಾರ್ಯಾಚರಣೆ ಮಾಡಿ ಪತ್ತೆ ಮಾಡಿದ್ದಾರೆ.

ಧಾರವಾಡ ನಗದಲ್ಲಿ ಸರಗಳ್ಳತನ ಮಾಡಿದವರಿಗೆ ಎಡೆಮೂರೆಯನ್ನು ಕಟ್ಟಿ ಬಂಧನ ಮಾಡಿ ಕರೆದುಕೊಂಡು ಬಂದಿದ್ದಾರೆ.ಇತ್ತೀಚಿಗೆ ಧಾರವಾಡ ನಗರದಲ್ಲಿ ಸರಣಿ ಸರಗಳ್ಳತನ ನಡೆದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.ಬೈಕ್ ಗಳನ್ನು ಕಳ್ಳತನ ಮಾಡಿ ಅದೇ ಬೈಕ್ ನಲ್ಲಿಯೇ ನಗರದ ಹೊಸಯಲ್ಲಾಪೂರ,ಶ್ರೀನಗರ ಸೇರಿದಂತೆ‌ ಹಲವೆಡೆ ಶಹರ ಠಾಣಾ ವ್ಯಾಪ್ತಿ ಹಾಗೂ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನದ ಪ್ರಕರಣಗಳು ನಡೆದಿದ್ದವು. ಆರೋಪಿತರು ಬೈಕ್ ಗಳನ್ನು ಕದ್ದು ಹಾಡುಹಗಲೇ ಸರಗಳ್ಳತನ ಮಾಡುತ್ತಿದ್ದರು.ಈ ಒಂದು ಪ್ರಕರಣಗಳನ್ನು ಪೊಲೀಸ್ ಆಯುಕ್ತರಾದ ಲಾಬೂರಾಮ್  ಅವರು ಗಂಭೀರವಾಗಿಪರಿಗಣಿಸಿ‌ ಸಿಸಿಬಿ ಇನ್ಸ್ಪೆಕ್ಟರ್ ಅಲ್ತಾಫ್ ಮುಲ್ಲಾ ಹಾಗೂ ಉಪನಗರ ಠಾಣೆ ಸಿಪಿಐ ರಮೇಶ ಹೂಗಾರ,ಶಹರ ಠಾಣೆ ಯ ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ,ಪಿಎಸ್ ಐ ಶ್ರೀಮಂತ ಹುಣಸಿಕಟ್ಟಿ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.

ಪೊಲೀಸ್ ಆಯುಕ್ತರು ಸೂಚನೆ ಕೊಡುತ್ತಿದ್ದಂತೆ ಸಿಬ್ಬಂದಿ ಗಳನ್ನು ಬೆನ್ನಿಗೆ ಕಟ್ಟಿಕೊಂಡ ಇಬ್ಬರು ಇನ್ಸ್ಪೆಕ್ಟರ್ ಹಾಗೇ ಪಿಎಸ್ಐ ಅವರು ಯಶಶ್ವಿಯಾಗಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಹಿಡಿದಿದ್ದಾರೆ.ರಾಜ್ಯದಲ್ಲಿ ಕಳ್ಳತನ ಮಾಡಿ ದೂರದ ಮಹಾರಾಷ್ಟ್ರದ ನಿವಾಸಿಯಾಗಿದ್ದು ಆಂಧ್ರಪ್ರದೇಶದ ಗುಂತಕಲ್ ನಲ್ಲಿ ಹೋಗಿ ಕುಳಿತುಕೊಂ ಡಿದ್ದ ಆರೋಪಿ ಸಾಹಿಲ್ ಜಾಫರಿ (27)ಬಂಧನ ಮಾಡಿದ್ದಾರೆ.ಈತನೊಂದಿಗೆ ಸಾತ್ ಕೊಟ್ಟಿರುವ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಹೀಗಾಗಿ ಸಧ್ಯ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತರಿಂದ140 ಗ್ರಾಂ ಚಿನ್ನಾಭರಣ2 ಬೈಕ್ ವಶಪಡಿಸಿಕೊಳ್ಳಲಾಗಿದೆ.ಹೊಸ ವರ್ಷದ ಆರಂಭದಲ್ಲಿ ಅವಳಿನಗರದ  ಪೊಲೀಸರು ಸಾರ್ವಜನಿಕರಿಗೆ ನೆಮ್ಮದಿ ತರುವಂತಹ ಕೆಲಸ ಮಾಡಿ ತೋರಿಸಿದಕ್ಕೆ ಪೇಢಾ ನಗರಿ ಮಂದಿ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತಿದ್ದು ಈ ಒಂದು ಕಾರ್ಯಾಚರಣೆ ಮಾಡಿದ ಟೀಮ್ ಗೆ ಪೊಲೀಸ್ ಆಯು ಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಶ್ಲಾಘಿಸಿದ್ದಾರೆ ಇನ್ನೂ ಈ ಒಂದು ಟೀಮ್ ನಲ್ಲಿ ಇನ್ಸ್ಪೆಕ್ಟರ್ ರಮೇಶ ಹೂಗಾರ, ಅಲ್ತಾಫ್ ಮುಲ್ಲಾ,ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಎಎಸ್ಐ ಸಿಬ್ಬಂದಿ ಗಳಾದ ಪೊಲೀಸ್ ಸಿಬ್ಬಂದಿಗಳಾದ ಕೆ ಎನ್ ನೆಲಗುಡ್ಡ,ಎಂ ಆರ್ ಮಲ್ಲಿಗವಾಡ,ಶಿವಾಜಿ ಸಾಳುಂಕೆ,ಈರಣ್ಣಾ ಬುರ್ಜಿ,ದಯಾನಂದ ಗುಂಡಗೈ,ಸಿ ಎನ್ ಸವದತ್ತಿ, ಸಿ ಡಿ ಬಳ್ಳಾರಿ,ಎನ್ ಓ ಜಾಧವ,ಬಿ ಪಿ ದುಮ್ಮಾಳ,ಗೂಡುನಾಯ್ಕರ್,ಎಸ್ ಹೆಚ್ ಕೆಂಪೊಡಿ, ಮಹಾಂತೇಶ ಮಾದರ,ಆನಂದ ಬಡಿಗೇರ, ಶ್ರೀಕಾಂತ್ ತಲ್ಲೂರ,ಆರ್ ಕೆ ಅತ್ತಾರ,ಮಲ್ಲಿಕಾರ್ಜುನ ಚಿಕ್ಕಮಠ, ರಾಘವೇಂದ್ರ ಭಡಂಕರ್,ರವಿ ಮತ್ತು ಬಸವರಾಜ ಮಾಗುಂಡಕರ ಸೇರಿದಂತೆ ಹಲವರು ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.