ಧಾರವಾಡ –

ಹೌದು ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹೇಮಂತ್ ಗುರ್ಲಹೊಸೂರ ಮತ್ತು ಅವರ ಗೆಳೆಯರು ಹಾಗೂ ನಗರದ ಉಪನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳು ನಿಜವಾಗಿಯೂ ಸಮಾಜ ಮೆಚ್ಚುವಂತಹ ಕೆಲಸವನ್ನು ಮಾಡಿದ್ದಾರೆ

ಕಳೆದ ಕೆಲವು ದಿನಗಳಿಂದ ಮರಾಠಾ ಕಾಲೋನಿಯ ಪಾದಚಾರಿ ಮಾರ್ಗದಲ್ಲಿ ಅನಾಥವಾಗಿ ಕುಳಿತಿದ್ದ ಓವ೯ ವೃದ್ಧ ನನ್ನು ಹೇಮಂತ ಗುರ್ಲಹೊಸುರ ವೃದ್ಧಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಇಂತಹ ಒಂದು ಘಟನೆ ನಗರದಲ್ಲಿ ಜರುಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾ ಪೂರ ಗ್ರಾಮದ ನಿವಾಸಿ ಎನ್ನಲಾದ ಇಸ್ಮಾಯಿಲ್ ಅಬ್ದುಲ್ ರೆಹಮಾನ್ ಎಂಬುವರು 75 ರಿಂದ 78 ವಯಸ್ಸಿನ ವೃದ್ಧನನ್ನು ನುಗ್ಗಿಕೇರಿ ಸಾಧನಾ ವೃದ್ಧಾಶ್ರ ಮಕ್ಕೆ ದಾಖಲು ಮಾಡಿಸಿ ಹೇಮಂತ್ ಮತ್ತು ಗೆಳೆಯರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ವೃದ್ಧನನ್ನು ಗಮನಿಸಿದ ಹೇಮಂತ ಗುರ್ಲಹೊಸುರ ತಕ್ಷಣವೇ ಸಾಧನಾ ವೃದ್ಧಾಶ್ರಮದ ಸಂಸ್ಥಾಪಕ ಸತೀಶ ಸಜಾ೯ಪುರ ಅವರಿಗೆ ಕರೆಮಾಡಿ ಬರುವಂತೆ ಹಾಗೂ ಪೊಲೀಸ್ ಹೊಯ್ಸಳ ವಾಹನವನ್ನು ಕರೆ ಯಿಸಿ ವೃದ್ದನನ್ನು ಆಶ್ರಮಕ್ಕೆ ದಾಖಲು ಮಾಡಿದರು.

ಸಾಮಾಜಿಕ ಕಾರ್ಯಕರ್ತರಾದ ಹೇಮಂತ ಗುರ್ಲ. ಹೊಸುರ, ಹೊಯ್ಸಳದ ಮುಖ್ಯಪೇದೆ ಸಿ.ಎಮ್. ತಾಳಿಕೊಟಿ, ಕೆ.ಎಮ್.ಗುರುಒಡೆಯರ,ಪೇದೆ ರಾಜಪ್ಪ ಕಣಮೂರ,ಸತೀಶ್ ಸಜಾ೯ಪೂರ ಅವರ ತಂಡ ಈ ಅನಾಥ ವೃದ್ಧನನ್ನು ಆಶ್ರಮಕ್ಕೆ ಸೇರಿಸು ವಲ್ಲಿ ಸಾಮಾಜಿಕ ಪ್ರಜ್ಞೆ ಮೆರೆದರು.ಹೇಮಂತ ಗುರ್ಲಹೊಸುರ ಅವರು ಇತ್ತೀಚಿನ ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳನ್ನು ವಿತರಿಸಿ ಬಡವರ ಕಷ್ಟ- ನೋವು ನಲಿವಿಗೆ ಸ್ಪಂದಿಸಿದ್ದನ್ನು ಇಲ್ಲಿ ಸ್ಮರಿಸಬಹು ದಾಗಿದೆ.