ಧಾರವಾಡ –
ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ನಿಗಾವಹಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧಾರವಾಡ ಉಪನಗರ ಇನ್ಸ್ಪೆಕ್ಟರ್ ಪ್ರಮೋದ .ಸಿ. ಯಲಿಗಾರ ಮತ್ತು ಟೀಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರ ಣೆಯಲ್ಲಿ.ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಬಂಧನ ಮಾಡಲಾಗಿದೆ. ಧಾರವಾಡದ ಹಳೇ ಎಪಿಎಂಸಿ ಶಂಬುಲಿಂಗೇಶ್ವರ ದೇವಸ್ಥಾನದ ಹತ್ತಿರ ಅನಧೀಕೃತವಾಗಿ ಗಾಂಜಾ ವನ್ನು ಮಾರಾಟ ಮಾಡುವಾಗ ಒರ್ವ ಆರೋಪಿ ಯನ್ನು ಬಂಧನ ಮಾಡಿದ್ದಾರೆ.

ಹಾಜಿಬಾಷಾ. ಮಹ್ಮದರಫೀಕ. ಯಲ್ಲಾನೂರ. ಧಾರವಾಡ ಈತನನ್ನು ಸಿಬ್ಬಂದಿಯೊಂದಿಗೆ ಹಿಡಿದು ಸದರಿಯವನ ತಾಬಾದಿಂದ 5 ಗಾಂಜಾ ತುಂಬಿದ ಸಣ್ಣ ಪಾಸ್ಟಿಕ ಪಾಕೇಟಗಳು ಮತ್ತು ಖುಲ್ಲಾ ಗಾಂಜಾ ಒಟ್ಟು 206 ಗ್ರಾಂ ಗಾಂಜಾ ಹಾಗೂ ನಗದು ಹಣ 330 ರೂ ಗಳನ್ನು ವಶಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಿ ಮಾನ್ಯ ನ್ಯಾಯಾಲ ಯಕ್ಕೆ ಹಾಜರುಪಡಿಸಿದ್ದು ಸದರಿ ಆರೋಪಿತನು ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ

ಈ ಪ್ರಕರಣವನ್ನು ಭೇಧಿಸಿದ ಪ್ರಮೋದ್ ಯಲಿಗಾರ ಪೊಲೀಸ ಇನ್ಸಪೆಕ್ಟರ್, ಉಪನಗರ ಪೊಲೀಸ ಠಾಣೆ ಧಾರವಾಡ ಹಾಗೂ ಸಿಬ್ಬಂದಿ ಯವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಶ್ಲಾಘಿಸಿರುತ್ತಾರೆ. ಇನ್ನೂ ಈ ಒಂದು ಕಾರ್ಯಾ ಚರಣೆಯಲ್ಲಿ PSI ಶ್ರೀಮಂತ ಹುಣಸಿಕಟ್ಟಿ, ಸಿಬ್ಬಂದಿ ಗಳಾದ ಕಿರಣ ದೊಕ್ಕನ್ನವರ,ರಮೇಶ್ ಬದ್ನಿ, ಪ್ರದೀಪ್ ಕುಂದಗೋ
ಳ, ಚಂದ್ರು ನಡುವಿನ ಮನಿ,ಶಶಿ ನಿಲಮ್ಮನವರ,ಆನಂದ ಬಡಿಗೇರ, ಶ್ರೀಕಾಂತ್ ತಲ್ಲೂರ,ಮಹೇಶ್ ದೊಡ್ಡಮನಿ, ಸೇರಿ ದಂತೆ ಹಲವರು ಪಾಲ್ಗೊಂಡಿದ್ದರು