ಕಲಘಟಗಿ –
ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದು, ಸುಮಾರು 180 ಟನ್ ಕಬ್ಬು ಸುಟ್ಟು ಕರಕಲಾದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.

ತಾಲೂಕಿನ ರುಸ್ತುಂಸಾಬ್ ಕೆರೆಯ ಪಕ್ಕದ ಪ್ರಕಾಶ ಚಿನ್ನಪ್ಪ ದೂಪದ ಎಂಬುವವರಿಗೆ ಸೇರಿದ ರೈತನ ಹೋಲದಲ್ಲಿ ಈ ಘಟನೆ ನಡೆದಿದೆ. ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಅವಘಡ ನಡೆದಿದೆ ಎಂದು ಪ್ರಕಾಶ ರೈತ ಆರೋಪಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಹೊಲದಲ್ಲಿ ಇರುವ ಕೆಇಬಿ ಲೈನ್‌ಗಳನ್ನು ಸರಿಪಡಿಸಲು ಮನವಿ ಮಾಡಿದರು.

ಆದರೂ ಕೆ ಇ ಬಿ ಅಧಿಕಾರಿಗಳು ಮಾತ್ರ ಯಾವುದೆ ದುರಸ್ಥಿಗೆ ಮುಂದಾಗಿದಿಲ್ವಂತೆ, ಈಗ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾನು ಕಷ್ಟ ಪಟ್ಟ ಬೆಳೆದ ಬೆಳೆ ಈಗ ಕೈ ತಪ್ಪಿ ಹೋಗಿದ್ದು, ರೈತ ಪ್ರಕಾಶ ಕಣ್ಣಿರು ಹಾಕುತ್ತಿದ್ದಾರೆ. ಈ ಕೂಡಲೇ ಹೆಸ್ಕಾಂ ಹಾಗೂ ತಹಶೀಲದಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಮಗೆ ಪರಿಹಾರ ಕೋಡಿಸಬೇಕು ಎಂದು ರೈತ ಅಗ್ರಹಿಸುತ್ತಿದ್ದಾನೆ.