ಹುಬ್ಬಳ್ಳಿ –
ಪಾಲಿಕೆಯಲ್ಲಿ ಹಳಿ ತಪ್ಪಿದ ಆಡಳಿತ ವ್ಯವಸ್ಥೆ – ಆಡಳಿತ ಯಂತ್ರಕ್ಕೆ ಸರ್ಜರಿ ಮಾಡ್ತಾರಾ ಹೊಸ ಡಾಕ್ಟರ್
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆ ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದೆ.ಈ ಹಿಂದೆ ಆಯುಕ್ತ ರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿಯವರು ಅಧಿಕಾರ ವಹಿಸಿಕೊಂಡ ದಿನದಿಂದ ಕೊನೆಯ ದಿನದ ವರೆಗೂ ಕೈಯಲ್ಲಿ ಆದಷ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ
ಆದರೆ ಕೆಲಸ ಆಗಿದೆ ಇಲ್ಲ ಎಂಬೊದು ಗೊತ್ತಿಲ್ಲ ಒಂದು ದಿನವೂ ಯಾವ ವಿಭಾಗಕ್ಕೂ ದಿಢೀರ್ ಅಂತಾ ಹೋಗಲಿಲ್ಲ ಭೇಟಿ ನೀಡಲಿಲ್ಲ ಪಾಲಿಕೆಯ ಯಾವ ಯಾವ ವಿಭಾಗದಲ್ಲಿ ಯಾರು ಯಾರು ಏನು ಏನು ಮಾಡ್ತಾ ಇದ್ದಾರೆ ಎಂಬೊದನ್ನು ಒಮ್ಮೇಯೂ ನೋಡಲಿಲ್ಲ ಕೇಳಲಿಲ್ಲ ಯಾರೇ ಏನೇ ತಪ್ಪು ಮಾಡಿದ್ರು ಕೇಳಿಕೊಂಡು ನೋಡಿಕೊಂಡು ಸುಮ್ಮನಾಗುತ್ತಿದ್ದರು ಯಾರೇ ಯಾವುದೇ ರೀತಿಯ ಸಮಸ್ಯೆ ಗಮನಕ್ಕೆ ತಗೆದು ಕೊಂಡು ಬಂದರು ನೋಡಿ ಕೇಳಿ ಸುಮ್ಮನೆ ಆಗುತ್ತಿದ್ದರು
ಹೀಗಾಗಿ ಯಾರಿಗೂ ಹೇಳೊರಿಲ್ಲ ಕೇಳೊರಿಲ್ಲ ಎಂಬಂತಾಗಿದ್ದು ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಸಾರ್ವಜನಿಕರಿಗೆ ಕೆಲಸ ಕಾರ್ಯಗಳು ಆಗುತ್ತಿಲ್ಲ ಭರವಸೆ ಭರವಸೆ ಎಂಬೊದೆ ಸಿಗುತ್ತಿತ್ತು ಈ ಒಂದು ವಿಚಾರಕ್ಕೆ ಪಾಲಿಕೆಯ ಸದಸ್ಯರು ಕೂಡಾ ಬೇಸತ್ತಿದ್ದು ಸಭೆಯಲ್ಲಿ ಭರವಸೆಗಳ ಕುರಿತಂತೆ ಗಂಭೀರವಾಗಿ ಚರ್ಚೆಗಳಾಗಿದ್ದು ಹೀಗಿರುವಾಗ ಸಧ್ಯ ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದಿರುವ ಡಾ ರುದ್ರೇಶ್ ಘಾಳಿಯವರು ಆಡಳಿತ ವ್ಯವಸ್ಥೆಗೆ ಸರ್ಜರಿ ಮಾಡಿ ಚುರುಕು ಮುಟ್ಟಿಸುತ್ತಾರೆಯಾ ಅಥವಾ ಈ ಹಿಂದೆ ಡಾ ಈಶ್ವರ ಉಳ್ಳಾಗಡ್ಡಿಯವರು ಮಾಡಿದಂತೆ ಇವರು ಅದೇ ದಾರಿಯಲ್ಲಿ ಹೋಗುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……