ಅಥಣಿ –
ಕರ್ತವ್ಯ ಲೋಕ ಎಸಗಿದ ಹಿನ್ನಲೆಯಲ್ಲಿ ಬಿಸಿಯೂ ಟ ಯೋಜನೆಯ ಸಹಾಯಕ ನಿರ್ದೇಶರನ್ನು ಅಮಾ ನತು ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥ ಣಿಯಲ್ಲಿ ನಡೆದಿದೆ.ಪಟ್ಟಣದಲ್ಲಿ ಮಧ್ಯಾಹ್ನ ಬಿಸಿ ಯೂಟ ಯೋಜನೆಯ ತೊಗರಿ ಬೆಳೆಯನ್ನು ನಿಗದಿ ತ ನಾಲ್ಕು ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಂಚಿ ಕೆ ಮಾಡಿ ಕರ್ತವ್ಯ ಲೋಪ ಎಸಗಿದ್ದಕ್ಕಾಗಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಿಯಾಜ ಮಹಮದ ಮುಲ್ತಾನಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ್ ಅಮಾನತು ಮಾಡಿದ್ದಾರೆ.

ಅಧಿಕೃತವಾಗಿ ಅಗತ್ಯವಿರುವ ಹಾಗೂ ಬೇಡಿಕೆ ಸಲ್ಲಿ ಸಿದ ಶಾಲೆಗಳಿಗೆ ಪೂರೈಸುವ ಬದಲಿಗೆ ಬೇಡಿಕೆಯೇ ಇಲ್ಲದ ಶಾಲೆಗಳಿಗೆ 38.32 ಕ್ವಿಂಟಲ್ ತೊಗರಿ ಬೆಳೆ ಯನ್ನು ನಿಯಮಬಾಹಿರವಾಗಿ ವಿತರಿಸಿದ್ದು ವರದಿ ಯಿಂದ ತಿಳಿದುಬಂದಿದೆ.ಅರ್ಹ ಶಾಲೆಯ ಮಕ್ಕಳು ಸರ್ಕಾರಿ ಸೌಲಭ್ಯದಿಂದ ವಂಚಿತರಾಗಲು ಕಾರಣಿ ಭೂತರಾಗಿ ಕರ್ತವ್ಯ ಲೋಪ ಎಸಗಿರುವುದು ಮೆಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನ ತು ಮಾಡಲಾಗಿದೆ.ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.ರಿಯಾಜ ಅವರು ನಿಯಮ ಉಲ್ಲಂಘಿಸಿ ಖಾಸಗಿ ವಾಹನ ಗಳಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಹಂಚಿ ಕೆ ಮಾಡಿದ್ದರು.ಕೋಹಳ್ಳಿ ಸರ್ಕಾರಿ ಪ್ರೌಢಶಾಲೆಗೆ 10 ಕ್ವಿಂಟಾಲ್ ಅಥಣಿ ಅಬ್ದುಲ್ ಕಲಾಂ ಅನುದಾನಿತ ಪ್ರೌಢಶಾಲೆಗೆ 10 ಕ್ವಿಂಟಾಲ್ ಶ್ರೀಕೃಷ್ಣ ಶಿಕ್ಷಣ ಸಮಿತಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ 11. 29 ಕ್ವಿಂಟಾಲ್ ಮತ್ತು ಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯಕ್ಕೆ 8.03 ಕ್ವಿಂಟಾಲ್ ವಿತರಿಸಿದ್ದ ಬಗ್ಗೆ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಕ್ರಮ ವಹಿಸಲಾ ಗಿದೆ ಎಂದು ತಿಳಿಸಲಾಗಿದ್ದು ಸಧ್ಯ ಇವರನ್ನು ಸೇವೆ ಯಿಂದ ಅಮಾನತು ಮಾಡಿ ಆದೇಶವನ್ನು ಮಾಡ ಲಾಗಿದ್ದು ಮುಂದೇನಾಗುತ್ತೆದ ಎಂಬುದನ್ನು ಕಾದು ನೋಡಬೇಕು.