ಬೀದರ್ –
ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ರಸಗೊಬ್ಬರ ಕೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಬೀದರ್ ನಲ್ಲಿ ಅಮಾನತು ಮಾಡಲಾಗಿತ್ತು.ಈ ಒಂದು ಅಮಾನತು ಪ್ರಕರಣವನ್ನು ವಿಧಾನ ಪರಿಷತ್ ಸದಸ್ಯ ಡಾ ಚಂದ್ರಶೇ ಖರ ಪಾಟೀಲ ಖಂಡಿಸಿದ್ದಾರೆ.ರಸಗೊಬ್ಬರ ಕೇಳಿದ್ದಕ್ಕಾಗಿ ಕೇಂದ್ರ ಸಚಿವರು ಸಾಮಾನ್ಯ ಶಿಕ್ಷಕರ ಮೇಲೆ ದರ್ಪವನ್ನು ತೋರಿಸೊದಾ ಎಂದು ಪ್ರಶ್ನೆ ಮಾಡಿ ಕೂಡಲೇ ಈ ಒಂದು ಅಮಾನತು ಆದೇಶನ್ನು ಹಿಂದೆ ಪಡೆಯುವಂತೆ ಒತ್ತಾಯ ವನ್ನು ಮಾಡಿದ್ದಾರೆ.

ಶಿಕ್ಷಕ ಕುಶಾಲರಾವ ಪಾಟೀಲ ಅವರನ್ನು ಅಮಾನತು ಮಾಡುವ ಮೂಲಕ ಶಿಕ್ಷಕ ಸಮುದಾಯಕ್ಕೆ ಅವಮಾನ ಮಾಡಲಾಗಿದ್ದು ಇದನ್ನು ಕೂಡಲೇ ಹಿಂದೆ ಇದನ್ನು ಪಡೆಯ ಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಬಿ.ಪಾಟೀಲ ಪ್ರಕಟಣೆಯಲ್ಲಿ ಒತ್ತಾಯವನ್ನು ಮಾಡಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ರಸಗೊಬ್ಬರ ಕೇಳಿರುವುದು ತಪ್ಪೇ?. ಶಿಕ್ಷಕನ ಜತೆ ವಾಗ್ವಾದ ನಡೆಸಿ ಆತ ನನ್ನು ಅಮಾನತುಗೊಳಿಸಿ ಅಧಿಕಾರದ ದರ್ಪ ತೋರಿಸಲಾ ಗಿದೆ ಇದು ಸಲ್ಲ ವಸ್ತು ಸ್ಥಿತಿ ಅರಿಯದೇ ದ್ವೇಷ ಮನೋಭಾ ವದಿಂದ ವರ್ತಿಸಿರುವುದು ಅಪರಾಧ.ಜಿಲ್ಲೆಯಲ್ಲಿ ರಸಗೊ ಬ್ಬರ ಕೊರತೆ ಇದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉಡಾಫೆ ಉತ್ತರ ನೀಡುವ ಕೇಂದ್ರ ಸಚಿವ ಭಗವಂತ ಖೂಬಾ ಅವರು ಕೂಡಲೇ ಎಚ್ಚೆತ್ತುಕೊಂಡು ರೈತರಿಗೆ ಸಮರ್ಪಕ ಗೊಬ್ಬರ ಪೂರೈಸುವುದರ ಜೊತೆಗೆ ಅಮಾ ನತು ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.