ಭಾರತೀಯ ಜನತಾ ಪಕ್ಷದ ಧಾರವಾಡ ನಗರ 71 ರ ಯುವಮೋರ್ಚಾ ಘಟಕದ ಸ್ವಚ್ಛ ಸಂಡೇ ಕಾರ್ಯಕ್ರಮ ಧಾರವಾಡದಲ್ಲಿ ಮುಂದುವರೆದಿದೆ.
ಈ ರವಿವಾರ ಇಂದು ಬಿಜೆಪಿ ಯುವ ಮೋರ್ಚಾ ದವರು ಸ್ವಚ್ಚತೆಗೆ ಆಯ್ಕೆ ಮಾಡಿಕೊಂಡ ಸ್ಥಳ ಐತಿಹಾಸಿಕ ಧಾರವಾಡದ ಮುರುಘಾಮಠ.
ರವಿವಾರ ತಪ್ಪದೇ ಒಂದೊಂದು ಸ್ಥಳವನ್ನು ಕ್ಲೀನ್ ಮಾಡಿಕೊಂಡು ಬರುತ್ತಿದ್ದು ಈ ವಾರ ನಗರದ ಮುರುಘಾಮಠ ವನ್ನು ಸ್ವಚ್ಚತೆ ಮಾಡಲಾಯಿತು.
ಮುಂದಿನವಾರ ಮುರುಘಾಮಠದ ಜಾತ್ರೆ ಇದೆ ಹೀಗಾಗಿ ಬಿಜೆಪಿ ಯುವ ಘಟಕದ ವತಿಯಿಂದ ಇಂದು ಧಾರವಾಡದ ವಾರ್ಡ್ ನಂಬರ್ 6 ರ ಸುಪ್ರಸಿದ್ಧ ಮುರುಘಾಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಸಂಪೂರ್ಣ ಮಠದ ಆವರಣವನ್ನು ಸ್ವಚ್ಚತೆ ಮಾಡಿದರು.
ಮಠದಲ್ಲಿ ಸ್ವಾಮಿಜಿ ಮಲ್ಲಿಕಾರ್ಜುನ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ, ಯುವಮೋರ್ಚಾ ಅಧ್ಯಕ್ಷ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಾಯಿತು.
ಎರಡು ಮೂರು ಘಂಟೆಗಳ ಕಾಲ ಮಠದ ಆವರಣದಲ್ಲಿ ಸಂಪೂರ್ಣವಾಗಿ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಪ್ರತಿ ರವಿವಾರಕ್ಕೊಮ್ಮೆ ಒಂದೊಂದು ಸಾರ್ವಜನಿಕ ಸ್ಥಳದಲ್ಲಿ ಕ್ಲೀನ್ ಮಾಡಿಕೊಂಡು ಬರುತ್ತಿದ್ದು ಜಾತ್ರೆ ಹಿನ್ನಲೆಯಲ್ಲಿ ಮಠದ ಆವರಣದಲ್ಲಿ ಮತ್ತು ಸುತ್ತ ಮುತ್ತಲೂ ಸ್ವಚ್ಚತೆ ಮಾಡಿದರು.
ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ ಉಪ್ಪಾರ್, ಮಂಡಳ ಅಧ್ಯಕ್ಷ ಸುನೀಲ ಮೋರೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಶ್ರೀ ಸಿದ್ದು ಕಲ್ಯಾಣ ಶೆಟ್ಟಿ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿನಾಯಕ ಗೊಂಧಳಿ,
ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಅಳಗವಾಡಿ, ಸ್ವಚ್ಚ ಭಾರತ ಜಿಲ್ಲಾ ಸಂಚಾಲಕರಾದ ಸಹ ಸಂಚಾಲಕರಾದ ಪ್ರಕಾಶ್ ಇಂಗಳೆ, ಪಕ್ಷದ ಹಿರಿಯರಾದ ಪುಷ್ಪಾ ನವಲಗುಂದ,ನಿಂಗಪ್ಪ ಸಪೂರಿ, ಜಗದೀಶ್ ಚಿಕ್ಕಮಠ, ಕಪಿಲ ಶಿರಹಟ್ಟಿ, ಲತಾ ಕೆರಿಮಠ, ಮಾದೇವಿ ಕೌದಿ, ಮಾಲತಿ ಬರಗಿ, ರಾಹುಲ್ ಅಷ್ಟಗಿ ಯುವಮೋರ್ಚಾ ಪ್ರಮುಖ ಪದಾಧಿಕಾರಿಗಳಾದ ರಾಘವೇಂದ್ರ ತುಪ್ಪದ, ಕಾರ್ತಿಕ ಪೂಜಾರ್,
ಸಚಿನ ಚವಾಣ್, ಸೂರಂಜನ್ ಗೂಂಡೆ, ಸಾಗರ್ ಜೋಶಿ, ರಾಜೇಶ್ ನಾಯ್ಕ್ , ಅಮೃತ ಹೆಬ್ಬಳ್ಳಿ, ರವಿ ಮಾಳಗಾರ್, ವಿನಾಯಕ ಭೋಳೆ, ಪೃಥ್ವಿ ಚಿತಗುಬ್ಬಿ, ರೋಹಿತ, ಸಾಯಿಪ್ರಸಾದ, ಗಂಗನಗೌಡ, ನಿಂಗನಗೌಡ, ಹೇಮಂತ್, ನಾಗರಾಜ್ ಹಾಗೂ ಎಲ್ಲ ಯುವಮೋರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಸ್ವಚ್ಚತಾ ಸಂಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಚ್ಚತೆಗೆ ಸಾಥ್ ನೀಡಿದರು.