ಧಾರವಾಡ – ಈಗಾಗಲೇ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿರುವ ಬಿಜೆಪಿಯ ಯುವ ಮೋರ್ಚಾದ ಕಾರ್ಯಕರ್ತರು ಈಗ ಮತ್ತೊಂದು ಕಾರ್ಯಕ್ಕೇ ಮುಂದಾಗಿದ್ದಾರೆ. ಹೌದು ಇನ್ನೂ ಪ್ರತಿ ರವಿವಾರಕ್ಕೊಮ್ಮೆ ಕ್ಲೀನ್ ಸಂಡೇ ಎಂಬ ಹೆಸರಿನಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಿದ್ದಾರಂತೆ. ಈ ವಾರದಿಂದ ಕಾರ್ಯಕ್ರಮವು ಧಾರವಾಡದಲ್ಲಿ ಆರಂಭಗೊಂಡಿತು. ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಮೊದಲನೇಯ ಸ್ವಚ್ಚತಾ ಸಂಡೇ ಕಾರ್ಯಕ್ರಮಕ್ಕೇ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚಾಲನೆ ನೀಡಿದರು.
ಕೈಯಲ್ಲೊಂದು ಸಲಕಿಯನ್ನು ಹಿಡಿದುಕೊಂಡ ಶಾಸಕರು ಯುವ ಮೋರ್ಚಾ ಕಾರ್ಯಕರ್ತರು ಮುಖಂಡರು ಕೂಡಿಟ್ಟಿದ್ದ ಕಸವನ್ನು ತುಂಬುವ ಮೂಲಕ ಚಾಲನೆ ನೀಡಿದರು.
ಚಾಲನೆ ನೀಡಿ ಉದ್ದುದ್ದಾಗಿ ಭಾಷಣವನ್ನು ಮಾಡದೇ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಂತೆ ತಾವೊಬ್ಬರೂ ಕಾರ್ಯಕರ್ತರು ಎಂದುಕೊಂಡ ಶಾಸಕ ಅಮೃತ ದೇಸಾಯಿ ಸ್ವಚ್ಚತೆ ಮಾಡಿದ್ರು. ಬಿಜೆಪಿ ಯುವ ಮೋರ್ಚಾದ ನಗರ ಘಟಕ 71 ರ ಘಟಕದ ಅಧ್ಯಕ್ಷ ಶಕ್ತಿ ಹಿರೇಮಠ ಈ ಒಂದು ಸ್ವಚ್ಚತಾ ಸಂಡೇ ಕಾರ್ಯಕ್ರಮವನ್ನು ರೂಪಿಸಿದ್ದು ಮೊದಲನೇಯ ದಿನವಾದ ಇಂದು ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಮಾಡಲಾಯಿತು.
ನಗರ ಮತ್ತು ಗ್ರಾಮೀಣ ಯುವ ಮೋರ್ಚಾದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರೊಂದಿಗೆ ಶಾಸಕ ಅಮೃತ ದೇಸಾಯಿ ಕ್ಲೀನ್ ಮಾಡಿದ್ರು.ಹೊಸ ಬಸ್ ನಿಲ್ದಾಣದಲ್ಲಿ ಎಲ್ಲೇಂದರಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಳೆ ಬಾಟಲ್ ಹಾಗೇ ಕಸವನ್ನು ಕೂಡಿಸಿ ತುಂಬಿ ಬೇರೆ ಕಡೆ ಕಳಿಸಿದ್ರು.
ಇನ್ನೂ ಈ ಒಂದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ , ಕ್ಷೇತ್ರದ ಮಂಡಳ ಅಧ್ಯಕ್ಷ ಸುನೀಲ್ ಮೊರೆ, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಶಕ್ತಿ ಹಿರೇಮಠ, ಮತ್ತು ಕಿರಣ ಉಪ್ಪಾರ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮ ಹಂಜಿ, ಶಿವಯ್ಯ ಹಿರೇಮಠ,
ಬಿಜೆಪಿ ಮುಖಂಡರಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಈರಣ್ಣ ಹಪ್ಪಳಿ, ನಿರ್ಮಲಾ ಜವಳಿ, ಶ್ರೀಕಾಂತ ಪಾಟೀಲ್, ಪ್ರೀತಮ್ ನಾಯಕ್, ಗಂಗಾಧರ್ ಸಂಗಮಶೆಟ್ಟರ , ಮಂಜುನಾಥ ಸಿದ್ದಾಪುರ, ಮಂಜುನಾಥ ಯರಗಟ್ಟಿ, ವಿನಾಯಕ್ ಗೋಂದೋಳಿ, ಮುತ್ತು ಬನ್ನೂರ, ಹಾಗೂ ಎಲ್ಲಾ ಯುವ ಮೋರ್ಚಾ ಕಾರ್ಯಕರ್ತರು ಪಾಲ್ಗೊಂಡು ಸ್ವಚ್ಚತೆ ಮಾಡಿದರು.