ಪ್ರವಚನ ಮಾಡುತ್ತಲೇ ವೇದಿಕೆಯ ಮೇಲೆ ಜೀವ ಬಿಟ್ಟ ಸ್ವಾಮೀಜಿ – ಹುಟ್ಟು ಹಬ್ಬದ ದಿನವೇ ಕೊನೆ ಯುಸಿರೆಳೆದ ಸ್ವಾಮಿಜಿ ವಿಡಿಯೋ ವೈರಲ್…..

Suddi Sante Desk

ಬೆಳಗಾವಿ –

ಪ್ರವಚನ ಮಾಡುತ್ತಲೇ ವೇದಿಕೆಯ ಮೇಲೆ ಸ್ವಾಮಿಜಿ ಯೊಬ್ಬರು ಜೀವವನ್ನು ಬಿಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಹೌದು ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಸ್ವಾಮಿಜಿ ಯೊಬ್ಬರು ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಂ ಡಿದ್ದರು ವೇದಿಕೆಯ ಮೇಲೆ ಪ್ರವಚನ ಮಾಡುತ್ತಾ ಮಾಡುತ್ತಾ ಇನ್ನೇನು ಮುಗಿಸುವ ಕೊನೆಯ ಸಮಯದಲ್ಲಿ ಮಾತನಾಡುವಾಗಲೇ ಪ್ರಾಣವನ್ನು ಬಿಟ್ಟಿದ್ದಾರೆ.

ಪ್ರವಚನ ಹೇಳುತ್ತಲೇ ಸ್ವಾಮೀಜಿ ಸಾವಿಗೀಡಾಗಿದ್ದು ಸ್ವಾಮೀಜಿ ಸಾವಿನ ದೃಶ್ಯವು ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ.ತೀವ್ರ ಹೃದಯಾಘಾತದಿಂದ ಸ್ವಾಮೀಜಿ ಸಾವಿಗೀಡಾಗಿದ್ದಾರೆ. ಸಂಗನ ಬಸವ ಮಹಾಸ್ವಾಮೀಜಿ (53) ಹೃದಯಾಘಾತದಿಂದ ಸಾವಿಗೀಡಾದವರಾಗಿದ್ದು ಬಸವಯೋಗ ಮಂಟಪ ಟ್ರಸ್ಟ್ ನ ಬಳೋಬಾಳ ಮಠದ ಸ್ವಾಮೀಜಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದವರಾಗಿದ್ದು ನವೆಂಬರ್ 6 ರಂದು ಈ ಒಂದು ಘಟನೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ನವಂಬರ್ 6 ರಂದು ತಮ್ಮದೇ ಹುಟ್ಟು ಹಬ್ಬ ಆಚರಿಸಿ ಆಶೀರ್ವಚನ ನೀಡುತ್ತಿ ದ್ದರು ಸ್ವಾಮೀಜಿ.ಹುಟ್ಟು ಹಬ್ಬದ ದಿನವೇ ಪ್ರವಚನ ಹೇಳ್ತಾ ಹೇಳ್ತಾ ಭಕ್ತರ ಮುಂದೆ ಸ್ವಾಮೀಜಿ ಜೀವ ಬಿಟ್ಟಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.