ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದೇ ಅವೈಜ್ಞಾನಿಕ ವಾದ ಈ ಒಂದು ವರ್ಗಾವಣೆಯ ನೀತಿ ನಿಮಯಗಳಿಂ ದಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ. ತಾವು ಒಂದು ಕಡೆಗೆ ಹೆಂಡತಿ ಇನ್ನೊಂದು ಕಡೆಗೆ ತಂದೆ ತಾಯಿ ಮತ್ತೊಂದು ಕಡೆಗೆ ಊರು ಇನ್ನೊಂದು ಕಡೆಗೆ ನೌಕರಿ ಆ ಕಡೆ ಬಂಧು ಬಳಗ ಈ ಕಡೆ ಹೀಗೆ ದಿಕ್ಕಾಪಾಲಾಗಿ ಸೇವೆಗೆ ಸೇರಿದಾಗಿ ನಿಂದ ಹಿಡಿದುಕೊಂಡು ಈವರೆಗೆ ನೌಕರಿ ಮಾಡುತ್ತಿರುವ ಶಿಕ್ಷಕರ ಪಾಡು ಯಾರು ಕೇಳುತ್ತಿಲ್ಲ ನೋಡುತ್ತಿಲ್ಲ ಯಾಕ ಲಾದರೂ ಈ ಒಂದು ವೃತ್ತಿಗೆ ಬಂದಿದ್ದೇನೆ ಎಂಬ ಮನಸ್ತಾ ಪದಲ್ಲಿ ಸಾಕಷ್ಟು ಶಿಕ್ಷಕರಿದ್ದು ಇದೇಲ್ಲದರ ನಡುವೆ ಎಲ್ಲರ ಹಾಗೆ ನಮಗೂ ಕೂಡಾ ಒಂದಿಲ್ಲೊಂದು ದಿನ ಸ್ವತಃ ಜಿಲ್ಲೆಗೆ ಇಲ್ಲವೇ ತಾಲ್ಲೂಕಿಗೆ ಸಿಗುತ್ತದೆ ಎಂದುಕೊಂಡು ಕಾಯುತ್ತಿ ರುವ ಶಿಕ್ಷಕರು ಈಗ ಬೇಸತ್ತು ತಾವೇ ಸ್ವಯಂವಾಗಿ OTS ಮತ್ತು ವರ್ಗಾವಣೆಯಲ್ಲಿ ಶೇಕಡಾ 25 ನ್ನು ತಗೆಯುವುದು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಬೆಂಗಳೂರು ಚಲೋ ಗೆ ಕರೆ ಕೊಟ್ಟಿದ್ದಾರೆ
ಹೌದು ಈವರೆಗೆ ಶಿಕ್ಷಕರ ಧ್ವನಿಯಾಗಿರುವ ಸಂಘಟನೆಯ ನಾಯಕರನ್ನು ಕಾದು ಕಾದು ಇಲಾಖೆಯ ಅಧಿಕಾರಿಗಳ ನಡೆಯನ್ನು ನೋಡಿ ನೋಡಿ ಬೇಸತ್ತು ಈಗ ಅನಿವಾರ್ಯ ವಾಗಿ ಸ್ವಯಂ ಪ್ರೇರಿತವಾಗಿ ಬೆಂಗಳೂರು ಚಲೋ ಗೆ ಕರೆ ಕೊಟ್ಟಿದ್ದಾರೆ. ಈಗಾಗಲೇ ಕಳೆದ ಹಲವಾರು ದಿನಗಳಿಂದ ಹೋರಾಟದ ರೂಪ ರೇಷೆಗಳ ಕುರಿತಂತೆ ಚರ್ಚೆ ಚಿಂತನ ಮಾಡಿ ಅಂತಿಮವಾಗಿ ಏಪ್ರಿಲ್ 18 ರಂದು ಬೆಂಗಳೂರು ಚಲೋ ಗೆ ಕರೆ ಕೊಟ್ಟಿದ್ದಾರೆ.ಬಿಡುವಿಲ್ಲದ ವೇಬಿನಾರ್ ಸಭೆಯನ್ನು ಮಾಡಿ ಅಂತಿಮವಾಗಿ ಬೆಂಗಳೂರು ಚಲೋ ಮಾಡಲು ನಿರ್ಧಾರವನ್ನು ತಗೆದುಕೊಂಡಿದ್ದು ಹೀಗಾಗಿ ಸೋಮವಾರ ಬೆಂಗಳೂರಿನಲ್ಲಿ ಶಿಕ್ಷಕರಿಂದ ಬೆಂಗಳೂರು ಚಲೋ ನಡೆಯಲಿದ್ದು ವರ್ಷವಿಡಿ ಶಾಲೆಗಳಲ್ಲಿ ಸಮಯ ವನ್ನು ಕಳೆಯುತ್ತಿದ್ದ ಶಿಕ್ಷಕರಿಗೆ ಈಗ ಬೇಸಿಗೆ ರಜೆ ಇರುವುದ ರಿಂದ ಎಲ್ಲವನ್ನು ಬಿಟ್ಟು ಹೋರಾಟಕ್ಕೆ ತೆರಬೇಕಾಗಿರೊದು ಅನಿವಾರ್ಯವಾಗಿದೆ.ಇನ್ನೂ ಕೂಡಾ ಎರಡು ದಿನಗಳ ಕಾಲ ಸಮಯವಿದ್ದು ಹೀಗಾಗಿ ಬೆಂಗಳೂರಿಗೆ ಶಿಕ್ಷಕರು ಹೋಗುವ ಮುನ್ನ ಶಿಕ್ಷಣ ಸಚಿವರು ಈ ಕುರಿತಂತೆ ಸೂಕ್ತ ವಾದ ನಿರ್ಧಾರವನ್ನು ಘೋಷಣೆ ಮಾಡಿದರೆ ಒಳಿತು.