ಬೆಳಗಾವಿ –
ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮಾಸ್ಕ್ ಧರಿಸದೇ ವಾಹನದಲ್ಲಿ ಸಂಚರಿಸುತ್ತಿದ್ದ ಬೆಳಗಾವಿ ತಹಶೀಲ್ದಾರ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀ ಸರು ಇಂದು ದಂಡ ಹಾಕಿದ್ದಾರೆ. ಹೌದು ಸರ್ಕಾರಿ ವಾಹನದಲ್ಲಿ ಹೋಗತಾ ಇದ್ದ ಇವರನ್ನು ನೋಡಿದ ಪೊಲೀಸರು ನಿಲ್ಲಿಸಿ 250 ರೂ. ದಂಡ ವಿಧಿಸಿ ಕಳಿಸಿದ್ದಾರೆ.ನಗರದ ಚನ್ನಮ್ಮ ವೃತ್ತದಲ್ಲಿ ಪೊಲೀಸ ರು ತಪಾಸಣೆ ನಡೆಸುತ್ತಿದ್ದ ವೇಳೆ ತಹಶೀಲ್ದಾರರು ತಮ್ಮ ವಾಹನದಲ್ಲಿ ತೆರಳುತ್ತಿದ್ದರು.ಆಗ ಖಡೇ ಬಜಾರ ಪೊಲೀಸರು ವಾಹನ ನಿಲ್ಲಿಸಿ ವಿಚಾರಣೆ ನಡೆಸಿದಾಗ ತಹಶೀಲ್ದಾರ ಕುಲಕರ್ಣಿ ಅವರು ಮಾಸ್ಕ್ ಧರಿಸದಿರುವುದನ್ನು ಗಮನಿಸಿ ಪೊಲೀಸರು ದಂಡ ವಿಧಿಸಿದ್ದಾರೆ.

ಈ ವೇಳೆ ಮಾಸ್ಕ್ ಧರಿಸದೇ ಚನ್ನಮ್ಮ ವೃತ್ತಕ್ಕೆ ವಾಹ ನ ಬರುತ್ತಿದ್ದಂತೆ ಪೊಲೀಸರು ನಿಲ್ಲಿಸಿದಾಗ ಕೋವಿ ಡ್ ಸರ್ಕಾರಿ ನಿಯಮ ಉಲ್ಲಂಘಿಸಿರುವುದು ಬೆಳಕಿ ಗೆ ಬಂದಿದೆ.ತಹಶೀಲ್ದಾರರು ದಂಡ ಕಟ್ಟಿ ಕಚೇರಿಗೆ ತೆರಳಿದ್ದಾರೆ.
