ಧಾರವಾಡ –
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಧಾರವಾಡ ಗ್ರಾಮೀಣ ತಾಲೂಕಿನಲ್ಲಿ 100 ಮನೆಗಳ ಗಣತಿ ಕಾರ್ಯವನ್ನು ಶ್ರೀಮತಿ ಸಾವಿತ್ರಿ ಜಾಲಿಮರದ ಪೂರ್ಣಗೊಳಿಸಿದ್ದಾರೆ ಇವರೊಂದಿಗೆ ಗಣತಿದಾರರ ಮೇಲ್ವಿಚಾರಕರಾದ ಮುಲ್ಲಾನವರ ಅವರನ್ನು ತಾಲೂಕಾ ಆಡಳಿತ ವತಿಯಿಂದ ತಹಶಿಲ್ದಾರರಾದ ದೊಡ್ಡಪ್ಪ ಹೂಗಾರರವರು ಹಾಗೂ ಸದಸ್ಯರು ಹಿಂದುಳಿದ ವರ್ಗಗಳ ಆಯೋಗ ಕರ್ನಾಟಕ ಸರ್ಕಾರ ಬೆಂಗಳೂರು ರವರಾದ ಕೆ.ಎಮ್. ಕುಂದಗೋಳ ರವರು ಸನ್ಮಾನಿಸಿ ಗೌರವಿಸಿದರು.
ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಾದ ಶ್ರೀಮತಿ ಭಾನುಮತಿ ಹೆಚ್ ಈ ಧಾರವಾಡ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಂಗಾಧರ ಕಂದಕೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಕೃಷ್ಣ ಸದಲಗಿ ಶಿಕ್ಷಣ ಸಂಯೋಜಕರಾದ ಬಸವರಾಜ ಚಬ್ಬಿ ಹಾಗೂ ಶ್ರೀಕಾಂತ್ ಗೌಡರ ರವರು ಉಪಸ್ಥಿತರಿದ್ದರು.ಶಿಕ್ಷಕ ಎಲ್ ಐ ಲಕ್ಕಮ್ಮನವರ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……