ಸರ್ಕಾರಿ ಶಾಲೆಗಳಿಗೆ ಬೀಗ ಖಾಸಗಿ ಶಾಲೆಗಳಿಗೆ ಅನುಮತಿ ಇಲಾಖೆಯ ಅಧಿಕಾರಿಗಳ ಕೆಲಸ ಒಮ್ಮೆ ನೋಡಿ

Suddi Sante Desk

ಬೆಂಗಳೂರು –

ಹೌದು ಕರೋನ ನಂತರ ರಾಜ್ಯದಲ್ಲಿ ಸರ್ಕಾರಿ ಶಾಲೆ ಗಳಿಗೆ ಸಿಕ್ಕಾಪಟ್ಟಿ ಬೇಡಿಕೆ ಹೆಚ್ಚಾಗಿದ್ದು ಇವೆಲ್ಲದರ ನಡುವೆ ಸರ್ಕಾರಿ ಶಾಲೆಗಳು ಒಂದಾಂಗಿಯೇ ಬಾಗಿಲು ಮುಚ್ಚುತ್ತಿದ್ದು ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.ಈ ನಡುವೆ ಪುನಃ ಮತ್ತಷ್ಟು ಶಾಲೆಗಳ ಆರಂಭಕ್ಕೆ ಸರ್ಕಾರವೇ ಮಣೆ ಹಾಕಿರುವುದು ಆತಂಕದ ಸಂಗತಿಯಾಗಿದೆ.

ಇದೆಲ್ಲದರ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಕಳೆದ ಎರಡು ವರ್ಷದಲ್ಲಿ ಒಟ್ಟು 7 ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿದೆ.ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು 1835 ಇದ್ದರೆ,ಪ್ರೌಢ ಶಾಲೆ ಗಳು 164 ಇವೆ.ಇದರಲ್ಲಿ ಮಕ್ಕಳ ದಾಖಲಾತಿ ಕುಸಿತ ಪರಿಣಾಮ ಎರಡು ವರ್ಷದಲ್ಲಿ ಸಾಗರದಲ್ಲಿ 3,ಹೊಸನಗರ ಭದ್ರಾವತಿ,ತೀರ್ಥಹಳ್ಳಿ,ಶಿವಮೊಗ್ಗದಲ್ಲಿ ತಲಾ ಒಂದೊಂದು ಶಾಲೆಗಳು ಮುಚ್ಚಿವೆ.ಆದರೆ ಇದೇ ಅವಧಿಯಲ್ಲಿ ಒಟ್ಟು 18 ಖಾಸಗಿ ಶಾಲೆ ಆರಂಭ ಮಾಡಲು ಶಿಕ್ಷಣ ಇಲಾಖೆ ಅನು ಮತಿ ನೀಡಿದೆ. ಹೊಸ ಶಾಲೆ ಆರಂಭಕ್ಕೆ ಒಟ್ಟು 48 ಅರ್ಜಿ ಗಳು ಬಂದಿದ್ದು 30 ಅರ್ಜಿಗಳು ತಿರಸ್ಕಾರಗೊಂಡಿವೆ.ಸದ್ಯ 365 ಪ್ರಾಥಮಿಕ,145 ಖಾಸಗಿ ಪ್ರೌಢ ಶಾಲೆಗಳು ಜಿಲ್ಲೆ ಯಲ್ಲಿ ಚಾಲ್ತಿಯಲ್ಲಿವೆ.ಜಿಲ್ಲೆಯ 7 ತಾಲೂಕು ಪೈಕಿ ಶಿವಮೊಗ್ಗ,ಭದ್ರಾವತಿಯಲ್ಲಿ ಅತಿ ಹೆಚ್ಚು ಖಾಸಗಿ ಹೊಸ ಶಾಲೆ ಆರಂಭಿಸಲು ಅರ್ಜಿ ಬಂದಿವೆ.

ಸರ್ಕಾರಿ ಶಾಲೆಗಳ ಅವನತಿಗೆ ಸರ್ಕಾರವೇ ಕಾರಣವಾಗು ತ್ತಿದೆ.ಇಂಗ್ಲೀಷ್‌ ವ್ಯಾಮೋಹಕ್ಕೆ ಬಿದ್ದಿರುವ ಪೋಷಕರು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳ ಹಾದಿಹಿಡಿದಿದ್ದಾರೆ ಇತ್ತ ನಾನಾ ಕಾರಣಕ್ಕೆ ಸರ್ಕಾರಿ ಶಾಲೆಯ 1ರಿಂದ 5ನೇ ತರಗತಿ ಮಕ್ಕಳಿಗೆ ಇಂಗ್ಲೀಷ್‌ ಮಾಧ್ಯಮ ಆರಂಭ ಮಾಡಲು ಸರ್ಕಾರವೂ ಮೀನ ಮೇಷ ಎಣಿಸುತ್ತಿದೆ.ಇದೇ ಕಾರಣಕ್ಕೆ ಸದ್ದಿಲ್ಲದೇ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿದೆ ಬಹುತೇಕ ನಗರ,ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಖಾಸಗಿ ಶಿಕ್ಷಣ ಸಂಸ್ಥೆ ಈಗ ಗ್ರಾಮೀಣ ಭಾಗದತ್ತಲೂ ಕಾಲಿಟ್ಟಿವೆ.ಈ ಬಾರಿ ಹೊಸದಾಗಿ ಸಲ್ಲಿಕೆಯಾದ ಅರ್ಜಿ ಗಳಲ್ಲಿ ನಗರದ ಪ್ರದೇಶದಿಂದೇ ಹೆಚ್ಚು ಅರ್ಜಿ ಬಂದಿದ್ದರೂ, ಗ್ರಾಮೀಣ ಭಾಗದಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ. ಗ್ರಾಮೀಣ ಭಾಗದಲ್ಲೂ ಶಾಲೆ ತೆಗೆಯುವ ಇರಾದೆ ವ್ಯಕ್ತಪ ಡಿಸಿವೆ.

ಹೊಸ ಶಾಲೆ ಆರಂಭಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಶಿಕ್ಷಣ ಇಲಾಖೆ ಸರ್ಕಾರದ ಮಾರ್ಗಸೂಚಿಯಂತೆ ಸೌಲಭ್ಯ ಇರುವ ಕಡೆ ಮಾತ್ರ ಶಿಕ್ಷಣ ಇಲಾಖೆ ಹೊಸ ಶಾಲೆಗಳಿಗೆ ಅನುಮತಿ ನೀಡಲಾಗಿದೆ.ಈಗಾಗಲೇ ಹೊಸದಾಗಿ ಆರಂಭ ಗೊಂಡಿರುವ ಖಾಸಗಿ ಶಾಲೆಗಳ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳಿಗೆ ಮುಳುವಾಗುವುದು ಗ್ಯಾರಂಟಿ ಎಂಬುದು ಶಿಕ್ಷಕರ ವಲಯದಲ್ಲೇ ಕೇಳಿಬರುತ್ತಿರುವ ಆರೋಪ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.