ಧಾರವಾಡದಲ್ಲಿ ಮುಂದುವರಿದ ಟಾಟಾ ಮಾರ್ಕೊ ಪೋಲೊ ಕಾರ್ಮಿಕರ ಪ್ರತಿಭಟನೆ ವಿನಯ ಕುಲಕರ್ಣಿ ಅಭಿಮಾನಿ ಬಳಗ ಬೆಂಬಲ ಸಮಸ್ಯೆ ಆಲಿಸದ ಸ್ಥಳೀಯ ಶಾಸಕರು…..

Suddi Sante Desk

ಧಾರವಾಡ –

ಕೆಲವೊಂದಿಷ್ಟು ಬೇಡಿಕೆ ಮುಂದಿಟ್ಟುಕೊಂಡು ಧಾರವಾಡ ದಲ್ಲಿ ನಡೆಯುತ್ತಿರುವ ಟಾಟಾ ಮಾರ್ಕೊಫೊಲೊ ದ ಕಾರ್ಮಿಕರ ಹೋರಾಟ ಮುಂದುವರೆದಿದ್ದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಈ ಒಂದು ಪ್ರತಿಭಟನೆ ನಡೆಯುತ್ತಿದ್ದು ಕಾರ್ಮಿಕರು ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಮಾನಿ ಬಳಗದವರು ಬೆಂಬಲ ವ್ಯಕ್ತಪಡಿಸಿದರು.ಈ ಕೊಡಲೇ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಅವರಿಗೆ ಬೆಂಬಲಿಸಿ ತೀವ್ರ ಹೋರಾಟ ನಡೆಸಲಾಗುವದು ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಪ್ರಶಾಂತ ಕೇಕರೆ,ಸತೀಶ ತುರಮರಿ, ಪಾಲಿಕೆ ಸದಸ್ಯರಾದ ಶ್ರೀಮತಿ, ಸುರವ್ವ ಪಾಟೀಲ, ದೀಪಾ ನಿರಲಕಟ್ಟಿ, ಶಾಂತಮ್ಮ ಗುಜ್ಜಳ, ಶಿವಶಂಕರ ಹಂಪಣ್ಣವರ, ನಾಗರಾಜ ಗೌರಿ, ಆನಂದ ಸಿಂಗನಾಥ, ಅರುಣಕುಮಾರ ಮಜ್ಜಗಿ, ಮಹಬೂಬ ಮುಲ್ಲಾ, ಸಂತೊಷ ನಿರಲಕಟ್ಟಿ, ಬಸವರಾಜ ಜಾದವ, ಇಮ್ರಾನ ಕಳ್ಳಿಮನಿ, ಶಿವಾನಂದ ಗಿರಿಯೆಪ್ಪನವರ, ನವಿನ ಕದಂ, ಚಿನ್ನಿ ಬಸು, ಶಿವು ಚೆನ್ನ ಗೌಡ್ರ,ನೂರಾಹ್ಮದ ನದಾಪ, ಅಶೊಕ ದೊಡಮನಿ, ಪ್ರಕಾಶ ಬಾವಿಕಟ್ಟಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕ ಘಟಕದ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಮುಂತಾದವರು ಪಾಲ್ಗೊಂಡಿದ್ದರು.

ಇನ್ನೂ ಕಳೆದ ಒಂದು ವಾರದಿಂದ ಈ ಒಂದು ಹೋರಾಟ ನಡೆಯುತ್ತಿದ್ದರು ಕೂಡಾ ಸ್ಥಳೀಯ ಜನಪ್ರತಿನಿಧಿಗಳು ಸ್ಪಂದಿಸದಿರೊದು ವಿಷಾದ ದ ಸಂಗತಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.