ಬೆಂಗಳೂರು –
ಕಳೆದ ತಿಂಗಳು ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿ ಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಮತ್ತೆ ಕೆಲವೊಂದಿಷ್ಟು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದು ಒಟ್ಟು21 ನಿಗಮ ಮಂಡಳಿ ಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ಇನ್ನೂ ಈಗಾಗಲೇ ಆದೇಶ ಪ್ರತಿ ಸೇರಿರುವ ಎಲ್ಲಾ ಅಧ್ಯಕ್ಷರುಗಳು ಅಧಿಕಾರವನ್ನು ವಹಿಸಿಕೊಂಡು ಕಾರ್ಯವನ್ನು ಮಾಡು ತ್ತಿದ್ದು ಇದರ ನಡುವೆ ಹೊಸದೊಂದು ವಿಚಾರ ಬೆಳಕಿಗೆ ಬಂದಿದ್ದು ಜುಲೈ 26 ರಂದು ಪ್ರಕಟಗೊಂಡ ನಿಗಮ ಮಂಡಳಿಗಳ 21 ಜನ ಅಧ್ಯಕ್ಷರುಗಳೊಂದಿಗೆ ಧಾರವಾಡದ ತವನಪ್ಪ ಅಷ್ಟಗಿ ಅವರನ್ನು ಬಯಲು ಸೀಮೆ ಪ್ರದೇಶಾ ಭಿವೃದ್ದಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಅಂತೆ.
ಹೌದು ಇವರನ್ನು ಕೂಡಾ ಬಯಲು ಸೀಮೆ ಪ್ರದೇಶಾಭಿ ವೃದ್ದಿ ಗೆ ನೇಮಕ ಮಾಡಲಾಗಿದ್ದು ಆದರೆ ಈವರೆಗೆ ಇವರಿಗೆ ಇಲಾಖೆಯಿಂದ ಆಗಲಿ ರಾಜ್ಯ ಸರ್ಕಾರದಿಂದ ಆಗಲಿ ಯಾವುದೇ ಅಧಿಕೃತವಾದ ಮಾಹಿತಿ ಸಂದೇಶ ಬಂದಿಲ್ಲ ಏಕಾಎಕಿಯಾಗಿ ಬಿಜೆಪಿ ಪಕ್ಷದ ಹಿರಿಯ ನಾಯಕರು ವಿಮಾನ ನಿಲ್ದಾಣದಲ್ಲಿ ಭೇಟಿಯಾದಾಗ ನೀವು ಇನ್ನೂ ಯಾಕೇ ಅಧಿಕಾರವನ್ನು ವಹಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು ಈ ಒಂದು ಪ್ರಶ್ನೆ ಕೇಳುತ್ತಿದ್ದಂತೆ ತವನಪ್ಪ ಅಷ್ಟಗಿ ಯವರೇ ಉತ್ತರಿಸಲಾರದೇ ನಿಂತುಕೊಂಡರು ಅವರೇ ಆದೇಶ ಪ್ರತಿಯನ್ನು ತವನಪ್ಪ ಅಷ್ಟಗಿ ಯವರಿಗೆ ಕಳಿಸಿದ್ದಾರೆ
ಸಧ್ಯ ಅವರಿಂದಲೇ ಆದೇಶ ಪ್ರತಿ ಸಿಕ್ಕಿದ್ದು ಹದಿನೈದು ದಿನಗಳ ನಂತರ ಈ ಒಂದು ಸಂತೋಷದ ವಿಚಾರ ಗೊತ್ತಾ ಗಿದ್ದು ಸಧ್ಯ ರಾಜ್ಯ ಸರ್ಕಾರ ಮತ್ತು ಇಲಾಖೆಯಿಂದ ಯಾವ ಮಾಹಿತಿ ಸಂದೇಶ ಇನ್ನೂ ಕೂಡಾ ಸಿಕ್ಕಿಲ್ಲ ಒಟ್ಟಾರೆ ಪಕ್ಷ ಕ್ಕಾಗಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಜನಪ್ರೀಯ ಶಾಸಕ ಅಮೃತ ದೇಸಾಯಿ ಅವರೊಂದಿಗೆ ಹಗಲಿರುಳು ಓಡಾಡಿ ಕೊಂಡು ಕೆಲಸವನ್ನು ಮಾಡುತ್ತಿದ್ದು ಇವರ ನಿಷ್ಠೇಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದು ಬಯಲು ಸೀಮೆ ಪ್ರದೇಶದಲ್ಲಿ ಇವ ರಿಂದಲೇ ಸಾಕಷ್ಟು ಪ್ರಮಾಣದಲ್ಲಿ ಕೆಲಸಗಳಾಗಲಿ ಅಭಿ ವೃದ್ದಿಯಾಗಲಿ ಎಂದು ಶಾಸಕರಾದ ಅಮೃತ ದೇಸಾಯಿ ಹೇಳಿ ಅಭಿನಂದಿಸಿದ್ದಾರೆ. ಈ ಒಂದು ವಿಚಾರ ಕುರಿತಂತೆ ತವನಪ್ಪ ಅಷ್ಟಗಿ ಅವರು ಮಾತನಾಡಿ ಹೌದು ಈ ಒಂದು ಮಾಹಿತಿ ನನಗೂ ತಡವಾಗಿ ನಮ್ಮ ಪಕ್ಷದ ನಾಯಕರು ಕೇಳಿದಾಗ ಗೊತ್ತಾಗಿದ್ದು ನನ್ನ ಸೇವೆ ನೋಡಿ ದೊಡ್ಡ ಹುದ್ದೆ ಯನ್ನು ನೀಡಿದ್ದು ಸಂತೋಷವಾಗಿದೆ ಆದೇಶ ಪ್ರತಿಯೊಂ ದಿಗೆ ಶೀಘ್ರದಲ್ಲೇ ಅಧಿಕಾರವನ್ನು ವಹಿಸಿಕೊಳ್ಳುತ್ತೇನೆ ಎಂದಿದ್ದಾರೆ.ಒಟ್ಟಾರೆ ಏನೇ ಆಗಲಿ ರಾಜ್ಯ ಸರ್ಕಾರ ಅಥವಾ ಇಲಾಖೆ ಈ ಕುರಿತಂತೆ ಸಂಬಂಧಪಟ್ಟವರಿಗೆ ಸಮರ್ಪಕ ಮಾಹಿತಿಯನ್ನು ನಿಡೋದು ಅವಶ್ಯಕವಿದೆ.ಇಲ್ಲವಾದರೆ ಗೊಂದಲ ಉಂಟಾಗುತ್ತದೆ.