ನವದೆಹಲಿ –
ಈವರೆಗೆ ತೆರಿಗೆ ಕಟ್ಟುತ್ತಿದ್ದ ಹಿರಿಯ ನಾಗರೀಕರಿಗೆ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ವಿನಾಯಿತಿ ನೀಡಲಾಗಿದೆ. ಇದುವರೆಗೆ ಹಿರಿಯ ನಾಗರೀಕರು ಕೂಡ ತೆರಿಗೆ ಕಟ್ಟಬೇಕಾಗಿತ್ತು.
ಆದ್ರೇ ಇನ್ಮೇಲೆ 75 ವರ್ಷ ಮೇಲ್ಪಟ್ಟಂತ ಹಿರಿಯ ನಾಗರೀಕರು ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಗಿದೆ.ಇಂದು ಮಂಡನೆಯಾದ ಕೇಂದ್ರ ಬಜೆಟ್-2021ರಲ್ಲಿ ಘೋಷಣೆ ಮಾಡಲಾಗಿದೆ.
ಇಂದು ಬಜೆಟ್ ಮಂಡಿಸುತ್ತಾ ಮಾತನಾಡಿದಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪೆನ್ಷನ್ ಮತ್ತು ಠೇವಣಿ ಮೇಲೆ ಬಡ್ಡಿ ಪಡೆಯುತ್ತಿರುವವರಿಗೆ ಮಾತ್ರ ತೆರಿಗೆ ಕಟ್ಟೋದ್ರಿಂದ ವಿನಾಯ್ತಿ ನೀಡಲಾಗಿದೆ.
75 ವರ್ಷ ಮೇಲ್ಪಟ್ಟಂತ ಹಿರಿಯ ನಾಗರೀಕರಿಗೆ ತೆರಿಗೆ ಕಟ್ಟೋದ್ರಿಂದ ವಿನಾಯ್ತಿ ನೀಡಲಾಗುತ್ತಿದೆ ಎಂಬುದಾಗಿ ಘೋಷಿಸಿದ್ದಾರೆ.ಈ ಮೂಲಕ ಹಿರಿಯ ನಾಗರೀಕರಿಗೆ ಬಿಗ್ ರಿಲೀಫ್ ನೀಡಿದ್ದಾರೆ.