ಕುಂದಗೋಳ –
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಆದರ್ಶ ಶಿಕ್ಷಕರು ಎಂದೇ ಹೆಸರಾದ ಅಶೋಕ ನಾವಿ ಅವರು ನಿಧನರಾಗಿದ್ದಾರೆ. ಹೌದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕ ರಾಗಿದ್ದ ಇವರು ಇಂದು ನಿಧನರಾಗಿದ್ದಾರೆ.
ಧಾರವಾಡ ಜಿಲ್ಲೆಯ ಶಿಕ್ಷಕ ಬಂಧುಗಳು ಅತೀವ ಆಘಾತ ಕಾರಿ ದುಃಖಕರ ವಿಷಯದಿಂದ ನೊಂದುಕೊಂಡಿದ್ದಾರೆ ಅತೀ ವಿನಯವಂತರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳು ಹೃದಯವಂತರು.ದಯಾಮಯನಾದ ಭಗವಂತನು ಆತ್ಮಕ್ಕೆ ಚಿರ ಶಾಂತಿಯನ್ನು ದಯಪಾಲಿಸಲಿ. ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಸ್ನೇಹಿತರ ಬಳಗಕ್ಕೆ ಅವರ ಅಗಲಿಕೆಯ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥನೆ ಯನ್ನು ಜಿಲ್ಲೆಯ ತಾಲೂಕಿನ ಮತ್ತು ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಹೇಳಿದ್ದಾರೆ