ಶಿಕ್ಷಕ ಜ್ಞಾನದೇವ ಜಾಧವ್ ಬಂಧನ – ಬಂಧನದ ಹಿಂದಿನ ಕಾರಣ ಕೇಳಿದರೆ ಶಾಕ್ ಆಗುತ್ತದೆ

Suddi Sante Desk

ಬೆಂಗಳೂರು –

ರಾಜ್ಯ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿ ಸುವುದಾಗಿ ನಂಬಿಸಿ ಸುಮಾರು 63 ಮಂದಿ ಉದ್ಯೋಗಾಂ ಕ್ಷಿಗಳಿಂದ 25 ಲಕ್ಷ ವಸೂಲಿ ಮಾಡಿ ವಂಚಿಸಿದ್ದ ಅನುದಾ ನಿತ ಖಾಸಗಿ ಶಾಲೆಯ ಚಾಲಾಕಿ ಶಿಕ್ಷಕನೊಬ್ಬನನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹೌದು ಬಾಗಲಕೋಟೆಯ ಜ್ಞಾನದೇವ್‌ ಜಾಧವ್‌ ಬಂಧಿತನಾ ಗಿದ್ದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಹೆಸರಿ ನಲ್ಲಿ ನೇಮಕಾತಿ ಆದೇಶವನ್ನು ಸಹ ಹಣ ಕೊಟ್ಟ ಅಭ್ಯ ರ್ಥಿಗಳಿಗೆ ಆತ ನೀಡಿದ್ದ‌ನು.ಇಲಾಖೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಭ್ಯರ್ಥಿಗಳಿಗೆ ಈತನ ವಂಚನೆ ಬಗ್ಗೆ ಗೊತ್ತಾಗಿದೆ.ಈ ಸಂಬಂಧ ರಾಜ್ಯ ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ (ಆಡಳಿತ)ಎನ್‌.ರಮೇಶ್‌ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ.

ಪಶುಸಂಗೋಪನೆ ಇಲಾಖೆ ಮಂತ್ರಿ ಪ್ರಭು ಚವ್ಹಾಣ್‌ ಆಪ್ತರು.ನಾನು ಅವರ ಬಳಿ ಕೆಲಸ ಮಾಡಿದ್ದೇನೆ. ಸಚಿವ ರಿಗೆ ನಾನು ಕನ್ನಡ ಶಿಕ್ಷಕನಾಗಿದ್ದೆ ಎಂದು ಹೇಳಿ ಉದ್ಯೋ ಗಾಂಕ್ಷಿ ಯುವಕರಿಗೆ ಗಾಳ ಹಾಕಿದ್ದ ಜಾಧವ್‌ ಸಿಕ್ಕ ಸಿಕ್ಕವ ರಿಗೆ ಪಶುಸಂಗೋಪನೆ ಇಲಾಖೆಯಲ್ಲಿ ನೌಕರಿ ಕೊಡಿಸು ತ್ತೇನೆ ಎಂದು ನಂಬಿಸಿದ್ದ.ಅಲ್ಲದೆ ಪಶು ಸಂಗೋಪನೆ ಇಲಾಖೆಯು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ), ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹಾಗೂ ಡಿ ದರ್ಜೆ ಸೇರಿದಂತೆ 93 ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ ಎಂದು ಹೇಳಿದ್ದ ಆರೋಪಿ ಇಲಾಖೆಯೇ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ ಎನ್ನುವಂತೆ ನಕಲಿ ದಾಖಲೆ ಸೃಷ್ಟಿಸಿ ಅರ್ಜಿಗ ಳನ್ನು ವಿತರಿಸಿದ್ದ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ 63 ಮಂದಿಯನ್ನು ಆಯ್ಕೆ ಮಾಡಿದ ಆರೋಪಿ ತಲಾ 2 ರಿಂದ 4 ಲಕ್ಷ ರೂ.ನಂತೆ ಸುಮಾರು 25 ಲಕ್ಷ ವಸೂಲಿ ಮಾಡಿ ನೇಮಕಾತಿ ಆದೇಶ ಸಹ ಕೊಟ್ಟಿದ್ದ.ಇದಕ್ಕಾಗಿ ಪಶುಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ಮೊಹರು ಹಾಗೂ ಸಹಿಯನ್ನು ಸಹ ನಕಲು ಮಾಡಿ ದಾಖಲೆಗಳನ್ನು ಆತ ಸೃಷ್ಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.ಪ್ರತಿ ಹಂತದ ಲ್ಲೂ ಅಭ್ಯರ್ಥಿಗಳಿಗೆ ವಂಚನೆ ಗೊತ್ತಾಗದಂತೆ ಜಾಗರೂಕತೆ ವಹಿಸಿದ್ದ ಆರೋಪಿ ಇಡೀ ನೇಮಕಾತಿ ಪ್ರಕ್ರಿಯೆಯೂ ಥೇಟ್‌ ಸರ್ಕಾರಿ ನೇಮಕಾತಿಯಂತೆ ನಾಜೂಕಾಗಿ ನಡೆಸಿದ್ದ. ನೇಮಕಾತಿ ಆಯ್ಕೆ ಪಟ್ಟಿ ಪ್ರಕಟಗೊಂಡ ಬಳಿಕ ಆಕ್ಷೇಪಗ ಳಿದ್ದರೆ ಜುಲೈ 30 ರವರೆಗೆ ಅರ್ಜಿ ಸಲ್ಲಿಸುವಂತೆ ಸಹ ಪಶು ಸಂಗೋಪನೆ ಇಲಾಖೆಯ ಹೆಸರಿನಲ್ಲಿ ಆತ ಪ್ರಕಟಿಸಿದ್ದ. ಹೀಗೆ ಆಯ್ಕೆಗೊಂಡ ಕೆಲವರು ಇಲಾಖೆಯನ್ನು ಸಂಪರ್ಕಿ ಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.ಕೂಡಲೇ ಎಚ್ಚೆತ್ತ ಜಂಟಿ ನಿರ್ದೇಶಕರು ಸಂಜಯನಗರ ಠಾಣೆಗೆ ದೂರು ದಾಖಲಿಸಿದರು.ಅಂತೆಯೇ ತನಿಖೆ ಕೈಗೆತ್ತಿಕೊಂಡ ಪೊಲೀ ಸರು,ಮೊಬೈಲ್‌ ಕರೆಗಳ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಾಗಲಕೋಟೆಯಲ್ಲಿ ಹೊಸ ಮನೆ ಕಟ್ಟುತ್ತಿದ್ದೆ.ಇದಕ್ಕೆ ನಾನು ಉಳಿಸಿದ್ದ ಹಣವೆಲ್ಲಾ ಖರ್ಚು ಆಯಿತು.ಇನ್ನೂ ಹಣದ ಅಗತ್ಯವಿದ್ದ ಕಾರಣ ಸರ್ಕಾರಿ ನೌಕರಿ ಹೆಸರಿನಲ್ಲಿ ಜನರಿಗೆ ವಂಚಿಸಲು ಸಂಚು ರೂಪಿಸಿದೆ ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.2019ರಲ್ಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್‌ ಸಚಿವರಾದ ಬಳಿಕ ಅವರ ಪರಿಚಿತರ ಮೂಲಕ ಸಚಿವರಿಗೆ ಜಾಧವ್‌ ಸಂಪರ್ಕಕ್ಕೆ ಬಂದಿದ್ದ.ಆಗ ವಿಶೇಷ ಕರ್ತವ್ಯದ ಮೇರೆಗೆ ಸಚಿವರ ಆಪ್ತ ಶಾಖೆಗೆ ಜಾಧವ್‌ ವರ್ಗಾವಣೆಯಾಗಿತ್ತು.ಆ ವೇಳೆ ಸಚಿವರಿಗೆ ಜಾಧವ್‌ ಕನ್ನಡ ಕಲಿಸುತ್ತಿದ್ದ ಎನ್ನಲಾಗಿದೆ.ಆ ಸಂದರ್ಭದಲ್ಲಿ ಪಶು ಸಂಗೋ ಪನೆ ಇಲಾಖೆಯ ನೇಮಕಾತಿ ಪ್ರಕ್ರಿಯೆ ತಿಳಿದುಕೊಂಡಿದ್ದು ಮಾತ್ರವಲ್ಲದೆ ಕೆಲ ದಾಖಲೆಗಳನ್ನು ಕದ್ದು ನಕಲು ಮಾಡಿ ಕೊಂಡಿದ್ದ.2020ರಲ್ಲಿ ಆತನನ್ನು ಸಚಿವರ ಆಪ್ತ ಶಾಖೆ ಯಿಂದ ಮಾತೃ ಇಲಾಖೆಗೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿದ್ದು ಸಧ್ಯ ಈ ಕುರಿತು ಪೊಲೀಸರು ದೂರು ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.