ಚಿಕ್ಕೋಡಿ –
ಸಾಮಾನ್ಯವಾಗಿ ಯಾವುದೇ ಪೋಷಕರಿಗೆ ಮಕ್ಕಳು ಹುಟ್ಟಿದರೆ ವಿಭಿನ್ನ ರೀತಿಯಲ್ಲಿ ಪಾರ್ಟಿ ಸಂತೋಷ ಸಂಭ್ರಮಿಸೊದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲ್ಲೊಬ್ಬ ಸರ್ಕಾರಿ ಶಾಲೆಯ ಶಿಕ್ಷಕ ರೊಬ್ಬರು ತಮಗೆ ಮಗಳು ಹುಟ್ಟಿದ ಖುಷಿಗಾಗಿ ಸಂತೋಷಕ್ಕಾಗಿ ತಮ್ಮ ಶಾಲೆಯ ಮಕ್ಕಳಿಗೆ ಊಟ ಕೊಡಿಸಿ ಸಂತೋಷ ಗೊಂಡಿದ್ದಾರೆ
ಹೌದು ಬೆಳಗಾವಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೊಕಾನಟ್ಟಿ ಯ ಶಿಕ್ಷಕ ಕಿರಣ್ ಚಿರಂತಿಮಠ ಅವರೇ ಈ ಒಂದು ವಿಭಿನ್ನವಾದ ಪಾರ್ಟಿಯನ್ನು ಮಕ್ಕಳಿಗೆ ಕೊಟ್ಟು ವೈರಲ್ ಆಗಿದ್ದಾರೆ
ತಮಗೆ ಮಗಳು ಹುಟ್ಟಿದ್ದಾಳೆ ಎಂಬ ಒಂದು ದೊಡ್ಡ ಸಂತೋಷಕ್ಕೆ ಶಾಲೆಯ ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿ ಊಟ ಮಾಡಿಸಿದರು.ಶಿಕ್ಷಕ ಕಿರಣ್ ಚರಂತಿಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೊಕಾನಟ್ಟಿ ವಲಯ ಮೂಡ ಲಗಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಇಲ್ಲಿ ಕಾರ್ಯ ನಿರ್ವಹಣೆ ಮಾಡತಾ ಇದ್ದಾರೆ.
ಶಾಲೆಯ ಸುಮಾರು 150 ಮಕ್ಕಳಿಗೆ ಮಸಾಲೆ ಜೀರಾ ರೈಸ್ ಸಾಂಬಾರ್ ಮತ್ತು ಲಡಗಿ ಉಂಡೆ ಯೊಂದಿಗೆ ಹೊಟ್ಟೆ ತುಂಬಾ ನೀಡಿ ಶಾಲೆಯ ಮಕ್ಕಳಿಗೆ ಸಹೋದ್ಯೋಗಿ ಗಳಿಗೆ ಪಾರ್ಟಿ ನೀಡಿ ದರು.ಒಟ್ಟಾರೆ ಮಕ್ಕಳು ಹುಟ್ಟಿದ ಖುಷಿ ಯಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸಂಭ್ರಮಿ ಸಿದರೆ ಈ ಶಿಕ್ಷಕ ಹೀಗೆ ಮಾಡಿ ವೈರಲ್ ಆಗಿ ಮೆಚ್ಚುಗೆ ಪಡೆದುಕೊಂಡಿದ್ದಾರೆ.