ಬೆಂಗಳೂರು –
ಸಧ್ಯ ರಾಜ್ಯದಲ್ಲಿ ವರ್ಗಾವಣೆ ಆರಂಭಗೊಂಡಿದ್ದರು ಶಿಕ್ಷಕರು ವರ್ಗಾವಣೆ ಸಿಗದೆ ಹೇಗೆ ನರಕಯಾತನೆ ಅನುಭವಿಸುತ್ತಿದ್ದಾರೆ ಹೇಗಿದೆ ಅವರ ಪರಿಸ್ಥಿತಿ ಇದೆ ಇದೇಲ್ಲ ವನ್ನು ಶಿಕ್ಷಕ ಮಾಲತೇಶ್ ಬಬ್ಬಜ್ಜಿ ಅವರು ತುಂಬಾ ಅದ್ಭುತವಾಗಿ ಬರೆದಿದ್ದಾರೆ
ವರ್ಗಾವಣೆಯ ನೋವುಂಡವರಿಗೆ ಮಾತ್ರ ಗೊತ್ತು ಅವರವರ ತಾಪತ್ರಯ….
ಗಂಡ ಒಂದು ಕಡೆ
ಹೆಂಡತಿ ಒಂದು ಕಡೆ
ಮನೆಯಲ್ಲಿ ವಯಸ್ಸಾದ ತಂದೆ
ತಾಯಿಯರನ್ನು ನೋಡಿಕ್ಕೊಳ್ಳದ ಪರಿಸ್ಥಿತಿ ಬೇರೆ..
ಇಷ್ಟೆಲ್ಲ ನೊಂದುಕೊಂಡು ಮನಸ್ಸಿಲ್ಲದೆ ನೆಮ್ಮದಿಯಿಂದ ಹೇಗೆ ಜೀವನ ನಡೆಸಲು ಸಾಧ್ಯ??
ಹೇಗೆ ಪಾಠ ಮಾಡಲು ಸಾಧ್ಯ??
ಸಂಘದ ನಾಯಕತ್ವ ವಹಿಸಿದವರಿಗೆ ವರ್ಗಾವಣೆ ನೋವು ಗೊತ್ತಿದ್ದರೆ ಇಷ್ಟೊಂದು ದೊಡ್ಡ ಸಮಸ್ಯೆಯಾಗಲು ಬಿಡುತ್ತಿರಲಿಲ್ಲ…
✍️ಮಾಲತೇಶ್ ಬಬ್ಬಜ್ಜಿ