ಧಾರವಾಡ –
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಕಟ್ಟ ಕಡೆಯ ಹಳ್ಳಿ ಸ ಹಿ ಪ್ರಾ.ಶಾಲೆ ವನಹಳ್ಳಿ ಶಾಲೆಗೆ ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ಹೆಚ್ ಎಫ್ ಸಮುದ್ರಿ ಯವರು 60000 ರೂಪಾಯಿ ವೆಚ್ಚದಲ್ಲಿ ಆಫೀಸ್ ಕೊಠಡಿಗೆ ಕಾನ್ಫರೆನ್ಸ್ ಟೇಬಲ್ ಮತ್ತು ಚೇರ್ ಗಳನ್ನು ದೇಣಿಗೆ ನೀಡಿದರು.
ಶಾಲೆಗೆ ಹಸ್ತಾಂತರಿಸುವ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಕಲ್ಲಪ್ಪ ಪ ರಾಯನಾಳ ಗ್ರಾಮದ ಹಿರಿಯರು ಸಿದ್ದಪ್ಪ ಪ್ಯಾಟಿ ,ಶಂಕ್ರಪ್ಪ ಆರೆಣ್ಣವರ ಉಪಸ್ಥಿತ ರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರು ತಿಗಡಿ ಹಸೀನ ಸಮುದ್ರಿ ಒಬ್ಬ ಉತ್ತಮ ಶಿಕ್ಷಕಿ ನಲಿಕಲಿಯಲ್ಲಿ ಕಡಿಮೆ ವೆಚ್ಚದ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಮಕ್ಕಳಿಗೆ ಪರಿಣಾಮಕಾರಿಯಾಗಿ ಗುಣಾತ್ಮಕವಾಗಿ ಕಲಿಕೆ ಯನ್ನು ಅವರು ಮಾಡಿರುತ್ತಾರೆ.ಒಬ್ಬ ಶ್ರೇಷ್ಠ ವಿಜ್ಞಾನ ಚಿಂತಕಿಯಾಗಿ ಸಾಮಾಜಿಕ ಪಿಡುಗುಗಳ ಕುರಿತು ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ಇವರು ಮಾಡಿದ್ದಾರೆ.
ಇಂತಹ ಒಬ್ಬ ಆದರ್ಶ ಶಿಕ್ಷಕಿ ತನ್ನ ದುಡಿಮೆಯಲ್ಲಿ ಶಾಲೆಗಾಗಿ ತನ್ನ ಸೇವೆ ಇರಲಿ ಅಂತ ಮುಖ್ಯ ಶಿಕ್ಷಕರ ಕೊಠಡಿಯನ್ನು ಅತ್ಯಾಕರ್ಷಕವಾಗಿ ಕಾಣುವಂತೆ ಮಾಡಲು ತಮ್ಮ ಸ್ವಂತ ಹಣದಲ್ಲಿ ಸಾಮಗ್ರಿಗಳನ್ನು ಮಾಡಿಸಿ ಶಾಲೆಗೆ ನೀಡಿರುವುದು ಅತ್ಯಂತ ಶ್ಲಾಘನೀಯ ಎಂದರು.ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕರ ಸಂಘಟನೆ ನೇತಾರರು ಶ್ರೀ ಗುರು ತಿಗಡಿ ಯವರನ್ನು ಸನ್ಮಾನಿಸಲಾಯಿತು.ಶ್ರೀಮತಿ ವ್ಹಿ ಎನ್ ಕೀರ್ತಿವತಿ ಹಾಗೂ ಶ್ರೀ ಎಲ್ ಆಯ್ ಲಕ್ಕಮ್ಮನವರ ಉಪಸ್ಥಿತರಿದ್ದರು.
ವರದಿ ಎಲ್ ಐ ಲಕ್ಕಮ್ಮನವರ ಹಿರಿಯ ಶಿಕ್ಷಕರು.