ಧಾರವಾಡ –
ಧಾರವಾಡದ ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನರವರು ಇದುವರೆಗೆ ತಮ್ಮ ವೃತ್ತಿ ಜೀವನ ದಲ್ಲಿ ಕೂಡಿಟ್ಟ ಹಣವನ್ನು ಸರ್ಕಾರಿ ಶಾಲೆಯ ಮಕ್ಕಳ ಕಲಿಕೆಗೆ ಸಹಕಾರಿ ಆಗಲಿ ಅಂತ ಸುಮಾರು 80 ಶಾಲೆಗಳಿಗೆ ದತ್ತಿಯನ್ನು ನೀಡಿದ್ದಾರೆ.ಅವರ ಪ್ರೇರಣೆಯಿಂದ ಇಂದು ಧಾರವಾಡ ತಾಲೂಕಿನ ಅಮ್ಮಿನಭಾವಿಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಆ ಶಾಲೆಯ ಕನ್ನಡ ಶಿಕ್ಷಕಿ, ಅಪ್ನಾದೇಶ ಶಿಕ್ಷಕರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತರು, ಹಾಗೂ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಬಳಗದವರಾಗಿರುವ ಶಿವಲೀಲಾ ಪೂಜಾರ ಇಂದು ಐದು ಸಾವಿರ ಹಣವನ್ನು ಸದರಿ ಶಾಲೆಗೆ ದತ್ತಿನೀಡಿದರು.
ಈ ದತ್ತಿನಿಧಿ ಪಿಕ್ಸ ಡಿಪಾಜಿಟ್ ಆಗಲಿದ್ದು ಇದರಿಂದ ಬರುವ ಬಡ್ಡಿ ಹಣದಲ್ಲಿ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಕೊಡಿಸಲು ಇದು ಅನುಕೂಲ ಆಗಲಿದೆ ಶಿವಲೀಲಾ ಪೂಜಾರ ಇವರ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಲೂಸಿ ಸಾಲ್ಡಾನ ಈ ನಮ್ಮ ನಾಡಿನಲ್ಲಿ ಕೊಡುಗೈ ದಾನಿಗಳು ಸಾಕಷ್ಟು ಜನ ಇದ್ದಾರೆ ದತ್ತಿನಿಧಿ ಪ್ರತಿಭಾವಂತ ಮಕ್ಕಳ ಕಲಿಕೆಗೆ ಆಸರೆಯಾಗಲಿ ಎಂದರು
ಈ ದತ್ತಿನಿಧಿ ಇನ್ನೂ ಹೆಚ್ಚಾಗಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಇದು ಅದರಲ್ಲೂ ಬಡ ಮಕ್ಕಳ ಕಲಿಕೆಗೆ ಸಹಕಾರಿ ಆಗಲಿದೆ ಎಂದರು. ಈ ದತ್ತಿನಿಧಿಯನ್ನು ಮುಖ್ಯ ಶಿಕ್ಷಕಿ ಕೆ ಡಿ ಸರ್ವಾರ ಅವರಿಗೆ ವಿತರಿಸಿದರು, ತರಗಾರ ಬಿ ಎ ಕರಡಿಗುಡ್ಡ ಎಚ್ ಎ ಅಧೋನಿ ವಾಯ್ ಎಸ್ ಮೊಗಲೈ ಇದ್ದರು ಇನ್ನೂ ಇವರ ಕಾರ್ಯವನ್ನು ಶಿಕ್ಷಕ ಎಲ್ ಐ ಲಕ್ಕಮ್ಮನವರ ಸ್ವಾಗತಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು