ಅಂಕೋಲಾ –
ಶಿಕ್ಷಕರಿಗೆ ಬಿಇಓ ಮತ್ತು ಡಿಡಿಪಿಐ ಕಚೇರಿ ಅಲೆದಾಟ ತಪ್ಪಿಸಲು ಮತ್ತು ಮುಂದಿನ ದಿನದಲ್ಲಿ ಶಿಕ್ಷಕರು ತಮ್ಮ ಹಕ್ಕಗಳನ್ನು ಪಡೆಯಲು ಡಿಡಿಪಿಐ ಮತ್ತು ಬಿಇಒ ಕಚೇರಿಗೆ ಅಲೆದಾಡಿ ಕಷ್ಟ ಪಡಬೇಕಿಲ್ಲ.ಸರಕಾರ ನಿಮ್ಮ ಹಕ್ಕು ನಿಮ್ಮ ಮನೆ ಬಾಗಿಲಲ್ಲೇ ಸಿಗುವ ಹಾಗೆ ಯೋಜನೆ ರೂಪಿಸುವ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು ಅಂಕೋಲಾ ದಲ್ಲಿ ಮಾತನಾಡಿದ ಅವರು ಈ ಒಂದು ವಿಚಾರವನ್ನು ನಾನು ಗಂಭೀರವಾಗಿ ತಗೆದುಕೊಂಡಿದ್ದು ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುವುದು ಎಂದರು.

ಶಿಕ್ಷಕರ ಯಾವುದೇ ಸಮಸ್ಯೆ ಇದ್ದರೆ ಎಲ್ಲಾ ಕೆಲಸ ಕಾರ್ಯ ಗಳನ್ನು ಬಿಟ್ಟು ಬಿಇಓ ಮತ್ತು ಡಿಡಿಪಿಐ ಕಚೇರಿ ಗೆ ಸುತ್ತಾ ಡೊದು ದೊಡ್ಡ ಪ್ರಮಾಣದಲ್ಲಿ ತಲೆನೋವಿನ ಕೆಲಸ ವಾಗಿದ್ದು ಹೀಗಾಗಿ ಇದನ್ನು ತಿಳಿದುಕೊಂಡು ಶೀಘ್ರದಲ್ಲೇ ಶಿಕ್ಷಕರಿಗೆ ಹೊಸದೊಂದು ಯೋಜನೆ ಜಾರಿಗೆ ತರಲಾಗು ತ್ತಿದೆ ಎಂದರು.ಅವ್ವಾ ಸೇವಾ ಟ್ರಸ್ಟ್ ಹುಬ್ಬಳ್ಳಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕಾರವಾರ ಮತ್ತು ಅಂಕೋಲಾ ಘಟಕ,ಉ.ಕ. ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಜಿಲ್ಲಾಮಟ್ಟದ ಶಿಕ್ಷಕಿಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ ದರು.