ಬೆಂಗಳೂರು –
ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮ ಕಾತಿಗೆ ನಿನ್ನೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಸುಗಮವಾಗಿ ನಡೆದಿದ್ದು 69,159 ಅಭ್ಯರ್ಥಿಗಳು ಹಾಜರಾ ಗಿದ್ದರು.15 ಸಾವಿರ ಹುದ್ದೆಗಳಿಗೆ ನಡೆದ ಪರೀಕ್ಷೆಗೆ ಕಟ್ಟು ನಿಟ್ಟಿನ ಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿತ್ತುಪರೀಕ್ಷೆಗೆ 1.06 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಇವರಲ್ಲಿ 31,967 ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದರು.ಹೀಗಾಗಿ74,116 ಅರ್ಜಿಗಳನ್ನು ಪರೀಕ್ಷೆಗೆ ಪರಿಗಣಿಸಲಾಗಿತ್ತು.
2 ದಿನಗಳ ಪರೀಕ್ಷೆಯ ಮೊದಲ ದಿನವಾದ ಶನಿವಾರ 4,857 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಅಭ್ಯರ್ಥಿ ಗಳಿಗೆ ಮೊಬೈಲ್ ದೂರವಾಣಿ,ಬ್ಲ್ಯೂಟೂಥ್, ಕೈಗಡಿ ಯಾರ ಸೇರಿ ಯಾವುದೇ ರೀತಿ ಎಲೆಕ್ಟ್ರಾನಿಕ್ ಸಾಧನಗ ಳನ್ನು ನಿರ್ಬಂಧ ವಿಧಿಸಲಾಗಿತ್ತು.ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯಿತು.
ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವ ಡಿಸಲಾಗಿತ್ತು.