ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ವರ್ಗಾವಣೆಯ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ದಿಕ್ಕಾಪಾಲಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಶಿಕ್ಷಕರು ಸಿಡಿದೆದ್ದಿದ್ದಾರೆ.

ಹೌದು ಹೌದು ಈವರೆಗೆ ಅವರಿಂದ ಇವರಿಂದ ನ್ಯಾಯ ಸಿಗುತ್ತದೆ ಎಂದುಕೊಂಡು ಕಾದು ಕಾದು ಸಧ್ಯ ಅಂತಿಮ ವಾಗಿ ಬೆಂಗಳೂರು ಚಲೋ ಹೋರಾಟವನ್ನು ಹಮ್ಮಿಕೊಂ ಡಿದ್ದು ಹೀಗಾಗಿ ನಾಡಿನ ಮೂಲೆ ಮೂಲೆಗಳಿಂದ ಸ್ವಯಂ ಪ್ರೇರಿತ ವಾಗಿ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಬೆಂಗಳೂ ರಿನತ್ತ ಮುಖ ಮಾಡಿದ್ದಾರೆ.


ಈಗಾಗಲೇ ಸಧ್ಯ ಶಾಲೆಗಳಿಗೆ ಒಂದು ಕಡೆ ಬೇಸಿಗೆ ರಜೆ ಇದೆ ಮತ್ತೊಂದು ಕಡೆಗೆ ಈಗಾಗಲೇ ಬೆಂಗಳೂರು ಚಲೋ ವೇದಿಕೆಯವರು ಈ ಒಂದು ಹೋರಾಟಕ್ಕೆ ಕರೆ ಕೊಟ್ಟ ಹಿನ್ನಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ವರ್ಗಾವ ಣೆಯ ವಂಚಿತವಾದ ಶಿಕ್ಷಕರು ರಾಜಧಾನಿಯತ್ತ ಮುಖ ಮಾಡಿದ್ದಾರೆ.ಅದರಲ್ಲೂ ಕೆಲವರಂತೂ ಕುಟುಂಬ ಸಮೇತ ವಾಗಿ ಬೆಂಗಳೂರಿನತ್ತ ಹೊರಟಿದ್ದು

ನಾಳೆ ಬೆಳಿಗ್ಗೆ ಎಲ್ಲರೂ ಒಂದು ಕಡೆಗೆ ಸೇರಿಕೊಂಡು ಪ್ರಮು ಖವಾಗಿ ಒಟಿಎಸ್ ಮತ್ತು ಶೇ 25 ನ್ನು ವರ್ಗಾವಣೆಯಲ್ಲಿ ತಗೆಯುವ ಕುರಿತಂತೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಒಂದು ಬೆಂಗಳೂರು ಚಲೋ ವನ್ನು ಹಮ್ಮಿಕೊಂಡಿದ್ದು ಶಿಕ್ಷಕರೇ ಸಿಡಿದೆದ್ದಿದ್ದು ಸ್ವಯಂ ಪ್ರೇರಿತವಾಗಿ ಈ ಒಂದು ಹೋರಾಟವನ್ನು ಮಾಡುತ್ತಿದ್ದು ಮಕ್ಕಳು ಹೆಂಡತಿ ಹೀಗೆ ಕುಟುಂಬ ಸಮೇತರಾಗಿ ಹೋರಾಟದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ.