This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಮಾನ್ಯ ಷಡಕ್ಷಾರಿ, ಶಂಭುಲಿಂಗನಗೌಡ ಅವರಿಗೆ ಶಿಕ್ಷಕರ ಸಂದೇಶ….

WhatsApp Group Join Now
Telegram Group Join Now

ಬೆಂಗಳೂರು –

ಮಾನ್ಯ ಷಡಕ್ಷರಿಯವರು,ರಾಜ್ಯಾಧ್ಯಕ್ಷರು ಕ. ರಾ. ಸ. ನೌ. ಸಂಘ, ಬೆಂಗಳೂರು ಮಾನ್ಯ ಶಂಭುಲಿಂಗನಗೌಡರು ಅಧ್ಯಕ್ಷರು, ಕ. ರಾ. ಪ್ರಾ. ಶಾ. ಶಿ. ಸಂಘ ಬೆಂಗಳೂರು.

ವಿಷಯ :- ದಿನಾಂಕ 08/11/21 ರಂದು ಶಿಕ್ಷಕರ ಸಮಸ್ಸೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಸಭೆಯಲ್ಲಿ “ಶಿಕ್ಷಕರ ವರ್ಗಾವಣೆಗೆ” ಸಂಬಂಧಿಸಿದಂತೆ ಈ ಕೆಳಗಿನ ಸಮಸ್ಸೆಯನ್ನು ಪ್ರಸ್ತಾಪಿಸಿ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಕೋರಿ.

ಮಾನ್ಯರೆ, 2020 ರ ಸೆಪ್ಟೆಂಬರ್ ತಿಂಗಳಲ್ಲಿ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನಿಸಿ, ಕೋರಿಕೆ ಹಾಗೂ ಪರಸ್ಪರ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಕೋರಿದಾಗ ನಾವು (ಇಬ್ಬರು ಶಿಕ್ಷಕರು ) ವರ್ಗಾವಣೆ ನಿಯಮಗಳ ಅನುಸಾರ “2020 ರ ಸೆಪ್ಟೆಂಬರ್ ನಲ್ಲಿ ಪರಸ್ಪರ – ವರ್ಗಾವಣೆಗೆ ” ಅರ್ಜಿ ಸಲ್ಲಿಸಿದ್ದೇವೆ.ಅರ್ಜಿ ಸ್ವೀಕರಿಸಿ,ಅಪ್ರೋವ್ ಮಾಡಿ 2021 ರಲ್ಲಿವರ್ಗಾವಣೆ ಕೌಂಸೆಲ್ಲಿಂಗ್ ನಡೆಯಬೇಕಾದ ಈ ಸಂದರ್ಭದಲ್ಲಿ (ಸೆಪ್ಟೆಂಬರ್ 2021 ರಂದು,12 ತಿಂಗಳ ನಂತರ ) ಪರಸ್ಪರ ವರ್ಗಾವಣೆ ನಿಯಮಾನುಸಾರ ಆ ವೃಂದದಲ್ಲಿ 7 ಪೂರ್ಣ ಗೊಂಡ ಸೇವೆಯನ್ನು ಇಬ್ಬರೂ ಪೂರೈಸಿದ್ದರೂ ಹಾಗೂ ಸೇವಾವಧಿಯಲ್ಲಿ ಈ ಹಿಂದೆ ಒಂದು ಬಾರಿಯೂ ಪರಸ್ಪರ ವರ್ಗಾವಣೆ ಪಡೆದಿಲ್ಲದಿದ್ದರೂ ಮತ್ತು ವಿಷಯ ಹಾಗೂ ವೃಂದ ಹೊಂದಾಣಿಕೆ ಇದ್ದಾಗಿಯೂ ನಮ್ಮಲ್ಲಿ ಒಬ್ಬರು ಈಗ ಕಾರ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ 3 ಪೂರ್ಣ ಗೊಂಡ ವರ್ಷಗಳ ಸೇವೆ ಸಲ್ಲಿಸಿಲ್ಲ ಎಂಬ ಈ ಬಾರಿಯ ವರ್ಗಾವಣೆ ನಿಯಮಾವಳಿಯಲ್ಲಿ ಇಲ್ಲದ ಕಾರಣ ನೀಡಿ ನಮ್ಮ ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ “ಪರಸ್ಪರ ವರ್ಗಾವಣೆ” ಅರ್ಜಿಯನ್ನು ತಿರಸ್ಕರಿಸಿರುವರು ಹಾಗೂ 2021 ರ ಸೆಪ್ಟೆಂಬರ್ ನಲ್ಲಿ ಕೋರಿಕೆ ವರ್ಗಾವಣೆ ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿರುತ್ತಾರೆ

ಆದ್ದರಿಂದ ನಮಗೆ ಅನ್ಯಾಯವಾಗಿದ್ದು, ಮೇಲಿನ ವರ್ಗಾವಣೆ ನಿಯಮಾವಳಿಯಲ್ಲಿಲ್ಲದ ನಿಯಮದ ನೆಪಹೇಳಿ ತಿರಸ್ಕರಿಸಿರುವ ನಮ್ಮ ಪರಸ್ಪರ ವರ್ಗಾವಣೆ ಅರ್ಜಿಯನ್ನು ದಯವಿಟ್ಟು ಈ ಬಾರಿಯ ವರ್ಗಾವಣೆ ಕೌನ್ಸ್ ಲಿಂಗ್ ನಲ್ಲಿ ಪರಿಗಣಿಸಿ ನಮಗೂ ಹಾಗೂ ರಾಜ್ಯದ ಸಾವಿರಾರು ಶಿಕ್ಷಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಈ ಮೂಲಕ ರಾಜ್ಯದ ಶಿಕ್ಷಕರ ಪರವಾಗಿ ಅತ್ಯಂತ ಕಳಕಳಿಯ ವಿನಂತಿ

ತಮ್ಮ ಸಹಾಯ /ನೆರವಿನ ನಿರೀಕ್ಷೆಯಲ್ಲಿ ಶಿಕ್ಷಕರು


Google News

 

 

WhatsApp Group Join Now
Telegram Group Join Now
Suddi Sante Desk