ಬೆಂಗಳೂರು –
ಸ್ವತಃ ಜಿಲ್ಲೆಗಳಾಗಿ ಒಮ್ಮೆ ವರ್ಗಾವಣೆ ಬಯಸಿ ನಾಡಿನ ಶಿಕ್ಷಕರು ಈಗಾಗಲೇ ಎರಡು ಬಾರಿ ಬೆಂಗಳೂರು ಚಲೋ ನಡೆಸಿ ಭರವಸೆ ಸಿಕ್ಕರೂ ಕೂಡಾ ಇನ್ನೂ ಈ ಒಂದು ವಿಚಾರ ಕುರಿತು ಸ್ವತಃ ಜಿಲ್ಲೆಗೆ ವರ್ಗಾವಣೆ ಬಯಸಿರುವ ಶಿಕ್ಷಕರಿಗೆ ಇನ್ನೂ ಕೂಡಾ ಯಾವುದೇ ರೀತಿಯ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಹೀಗಾಗಿ ಮತ್ತೊಮ್ಮೆ ಸಧ್ಯ ವರ್ಗಾವಣೆ ಯ ನಿರೀಕ್ಷೆ ಯಲ್ಲಿರುವ ಶಿಕ್ಷಕರು ಈ ಒಂದು ವಿಚಾರ ಕುರಿತು ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಯಲು ಮುಂದಾಗಿದ್ದಾರೆ

ಪತ್ರ ಚಳುವಳಿಯನ್ನು ರಾಜ್ಯದ ಎಲ್ಲಾ ಕಡೆಯಿಂದಲೂ ಆರಂಭ ಮಾಡಿ ಈ ಮೂಲಕ ಒತ್ತಡ ಹಾಕಲು ತೀರ್ಮಾನ ವನ್ನು ತಗೆದುಕೊಂಡಿದ್ದು ಈ ಒಂದು ಹಿನ್ನೆಲೆಯಲ್ಲಿ ಪೂರ್ವಭಾವಿ ಯಾಗಿ ಚರ್ಚೆ ಮಾಡಲು ಇಂದು ಸಂಜೆ ಸಭೆಯನ್ನು ಕರೆದಿದ್ದಾರೆ ಮುಖ್ಯ ಮಂತ್ರಿಗಳಿಗೆ 2000 3000 ನಮ್ಮ ಪತ್ರಗಳ ಬಂಡಲ್ ಒಂದೇ ಬಾರಿಗೆ ಹೋಗಿ ತಲುಪಿದರೆ ಬಹಳಷ್ಟು ಪರಿಣಾಮಕಾರಿಯಾಗುತ್ತದೆ ಎಂಬ ಕಾರಣಕ್ಕಾಗಿ ಈ ಒಂದು ಸಭೆಯನ್ನು ಆಯೋಜನೆ ಮಾಡಿದ್ದಾರೆ

ಮಹತ್ವದ ಈ ಒಂದು ಸಭೆಗೆ ಹಾಜರಾಗಬೇಕು ಇನ್ನೂ ಎಲ್ಲರೂ ತಪ್ಪದೇ ಇನ್ ಲ್ಯಾಂಡ್ ಲೆಟರ್ ನಲ್ಲಿ ನಮ್ಮ ನೋವನ್ನ ಬರೆದು ಹಾಕಿ ಇದು ದೊಡ್ಡ ಮಟ್ಟದಲ್ಲಿ ನಮಗೆ ಗೆಲುವು ತಂದು ಕೊಡುತ್ತದೆ ಎಂದು ರಾಜ್ಯಾಧ್ಯಕ್ಷರು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಪವಾಡೆಪ್ಪ ಅವರು ಹಾಗೇ ಮಹೇಶ ಮಡ್ಡಿ ಅವರು ವಿನಂತಿ ಮಾಡಿಕೊಂಡಿದ್ದು ಇವರ ನೇತೃತ್ವದಲ್ಲಿ ಈ ಒಂದು ಕ್ಲಬ್ ಹೌಸ್ ಸಭೆ ನಡೆಯಲಿದೆ.