ಬೆಂಗಳೂರು –
ಶಿಕ್ಷಕರಿಗೆ ಪದೋನ್ನತಿಗಾಗಿ ರಚನೆಯಾಗಲಿದೆ ಸಮಿತಿ ರಚಿಸಿ ತೀರ್ಮಾನ – ಅಧಿಕಾರಿಗಳು ದಾರಿ ತಪ್ಪಿಸುತ್ತಾ ರಂತೆ ಸದನದಲ್ಲಿ ಶಾಕಿಂಗ್ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೌದು
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದೋನ್ನತಿ ನೀಡುವ ವಿಚಾರದಲ್ಲಿ ವಿಧಾನಪರಿಷತ್ತು ಸದಸ್ಯರು ಮತ್ತು ಸರಕಾರದ ಹಿರಿಯ ಅಧಿಕಾರಿಗಳು ಒಳಗೊಂಡ ಸಮಿತಿ ರಚಿಸಿ ಕಾಲ ಮಿತಿಯೊಳಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು
ವಿಧಾನ ಪರಿಷತ್‌ನಲ್ಲಿ ಹೇಳಿದರು.ಬಿಜೆಪಿಯ ಎಸ್ ವಿ ಸಂಕನೂರ, ಜೆಡಿಎಸ್‌ನ ಭೋಜೆಗೌಡ, ಕಾಂಗ್ರೆಸ್‌ನ ಪುಟ್ಟಣ್ಣ ಅವರ ಪ್ರಶ್ನೆಗೆ ಉತ್ತರ ನೀಡಿದರು ಆಂಧ್ರ ಪ್ರದೇಶ ಯಾವ ರೀತಿಯಲ್ಲಿ ಭಡ್ತಿ ನೀಡಲಾಗುತ್ತದೆ ಎಂಬ ವರದಿ ತರಿಸಿಕೊಳ್ಳಲಾಗುವುದು. ಆ ನಂತರ ಒಂದು ಸಮಿತಿ ರಚಿಿಿಸಿ ಕಾಲಮಿತಿ ಯೊಳಗೆ ಶಿಕ್ಷಕರಿಗೆ ಭಡ್ತಿ ನೀಡಲಾಗುವುದು. ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಮುಂದು ವರಿಯಲಾಗುವುದು ಎಂದರು.
ಇದೇ ವೇಳೆ ಮಾತನಾಡಿದ ಪುಟ್ಟಣ್ಣಯ್ಯ, ಭೋಜೇಗೌಡ ಭಡ್ತಿ ನೀಡುವ ವಿಚಾರದಲ್ಲಿ ಅಧಿಕಾರಿಗಳನ್ನು ಒಳ ಗೊಂಡ ಸಮಿತಿ ರಚನೆ ಮಾಡಬೇಡಿ. ಅವರು ದಾರಿ ತಪ್ಪಿಸುವ ಸಾಧ್ಯತೆ ಇದೆ. ಆ ಹಿನ್ನೆಲೆಯಲ್ಲಿ ಶಾಸಕರನ್ನು ಒಳಗೊಂಡ ಸಮಿತಿ ಮಾಡಿ ಎಂದು ಸಚಿವರಲ್ಲಿ ಮನವಿ ಮಾಡಿದರು. ಈ ವೇಳೆ ಶಾಸಕರನ್ನು ಒಳಗೊಂಡ ಸಮಿತಿ ರಚಿಸುವ ಭರವಸೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..