ಕೊನೆಯ ಪಂದ್ಯ ಗೆದ್ದ ಟೀಮ್ ಇಂಡಿಯಾ – ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದ್ದ ಪಿಂಚ್ ಗೆ ನಿರಾಸೆ

Suddi Sante Desk

ಕ್ಯಾನ್‌ಬೆರ್ರಾ –

ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಕೊನೆಯ ಏಕದಿನ ಪಂಧ್ಯದಲ್ಲಿ ಗೆಲುವು ಸಾಧಿಸಿದೆ. ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸರಣಿ ವೈಟ್‌ ವಾಶ್‌ ಸೋಲಿನಿಂದ ಪಾರಾಯಿತು. ಆಸ್ಟ್ರೇಲಿಯಾದ ಕ್ಯಾನಬೆರ್ರಾ ನಲ್ಲಿ ನಡೆದ ಕೊನೆಯ ಪಂಧ್ಯದಲ್ಲಿ ಕೊನೆಗೂ ವಿರಾಟ್ ಕೋಹ್ಲಿ ಅಂತಿಮ ಪಂದ್ಯವನ್ನು ಗೆದ್ದು ನಿಟ್ಟಿಸಿರು ಬಿಟ್ಟರು.ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ನಾಯಕ ವಿರಾಟ್‌ ಕೊಹ್ಲಿ ಮತ್ತು ಆಲ್ ರೌಂಡರುಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 302 ರನ್ ಗಳಿಸಿತು.ನಂತರ ಈ ಒಂದು ಮೊತ್ತವನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಟಿ.ನಟರಾಜನ್ ಎರಡು, ಶಾರ್ದೂಲ್‌ ಠಾಕೂರ್‌ ಮೂರು ಮತ್ತು ಬುಮ್ರಾ ಅವರ ಎರಡು ವಿಕೆಟ್ ನೆರವಿನಿಂದ ಟೀಂ ಇಂಡಿಯಾ ಆಸೀಸ್‌ ಅನ್ನು 13 ರನ್ನುಗಳಿಂದ ಪರಾಭವಗೊಳಿಸಿತು.

ಟೀಂ ಇಂಡಿಯಾ ನೀಡಿದ ಸವಾಲಿಗೆ ಉತ್ತರವಾಗಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವವರೆಗೂ ನಿಶ್ಚಿಂತೆಯಿಂದಿತ್ತು. ಈ ವಿಕೆಟ್ ಪತನವಾದ ಕೂಡಲೇ ಪ್ರವಾಸಿಗರಿಗೆ ವೈಟ್‌ ವಾಶ್ ಸೋಲುಣಿಸುವ ಅವಕಾಶದಿಂದ ವಂಚಿತವಾಯಿತು.

ನಾಯಕ ಆರನ್‌ ಫಿಂಚ್‌ (75) ಅವರ ಅರ್ಧಶತಕ ಹೊರತುಪಡಿಸಿ, ಇತರ ಆಟಗಾರರಿಂದಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಹೊಮ್ಮಲಿಲ್ಲ. ಮೊಯ್ಸಸ್‌ ಹೆನ್ರಿಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ 20 ರನ್ ಗಳಿಸಿ, ಔಟಾದರು. ಕಳೆದ ಎರಡು ಪಂದ್ಯಗಳ ಶತಕವೀರ ಸ್ಟೀವನ್‌ ಸ್ಮಿತ್‌ರನ್ನು ಈ ಬಾರಿ ಅಬ್ಬರಿಸಲು ಭಾರತ ಬಿಡಲಿಲ್ಲ. 7 ರನ್‌ ಗಳಿಸುವಷ್ಟರಲ್ಲಿ ಶಾರ್ದೂಲ್‌ ಠಾಕೂರ್‌ಗೆ ವಿಕೆಟ್ ಒಪ್ಪಿಸಿದರು.ಅಂತಿಮವಾಗಿ 49 ಓವರ್ ನಲ್ಲಿ ಆಸ್ಟ್ರೇಲಿಯಾ ತಂಡ ಎಲ್ಲಾ ವಿಕೇಟ್ ಗಳನ್ನು ಕಳೆದುಕೊಂಡು ಗೆಲ್ಲುವ ಕನಸನ್ನು ಬಿಟ್ಟಿತು. ಇತ್ತ ನಾಯಕ ಮೂರು ಪಂಧ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ಆಸೆ ಈಡೇರಲಿಲ್ಲ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.