ಬೆಂಗಳೂರು –
ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಟೀಮ್ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ಯವರ ನೇತ್ರತ್ವದಲ್ಲಿ ಭೇಟಿ ಅಭಿನಂದನೆ ಸಲ್ಲಿಕೆ…..ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ…..
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ರವರು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದಗಿ ಅಧಿಕಾರ ವಹಿಸಿಕೊಂಡ ರಿತೇಶ್ ಕುಮಾರ್ ಸಿಂಗ್ ರವರನ್ನು ಸರ್ಕಾರಿ ನೌಕರ ಸಂಘದಿಂದ ಅಭಿನಂದಿಸಲಾಯಿತು. ಹೌದು ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳೊಂ ದಿಗೆ ಭೇಟಿಯಾಗಿ ರಾಜ್ಯ ಸರ್ಕಾರಿ ನೌಕಕರ ಕೆಲ ವೊಂದಿಷ್ಟು ವಿಚಾರಗಳ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಯಿತು.ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರನ್ನು ops ವ್ಯಾಪ್ತಿಗೆ ತರಲು ಈಗಾಗಲೇ ಸಮಿತಿ ಕಾರ್ಯನಿರ್ವಹಿಸುತ್ತಿದ್ದು ಶೀಘ್ರ ವರದಿಯನ್ನು ಪಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರದ ಅಧಿಕಾರಿ ಮತ್ತು ನೌಕರರು ಹೊಂದಿರುವ ಉಳಿತಾಯ ಖಾತೆಗಳನ್ನು ಸಮಗ್ರ ಸಂಬಳ ಪ್ಯಾಕೇಜ್ ಖಾತೆಗಳನ್ನಾಗಿ ಪರಿವರ್ತಿಸಿ ಕೆಲವು ಉಚಿತ ಸೌಲಭ್ಯಗಳ ಜೊತೆಗೆ ಅಪಘಾತದಲ್ಲಿ ಮೃತಪ ಟ್ಟಲ್ಲಿ 1ಕೋಟಿ ವಿಮಾ ಸೌಲಭ್ಯವನ್ನು ಒದಗಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು ಅದರಂತೆ ಆರ್ಥಿಕ ಇಲಾಖೆಯಿಂದ ಅಧಿಕೃತ ಆದೇಶ ವನ್ನು ಹೊರಡಿಸುವುದಾಗಿ ತಿಳಿಸಿದರು.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)ಯನ್ನು ಶೀಘ್ರವಾಗಿ ಜಾರಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸುವುದಾಗಿ ತಿಳಿಸಿದರು ಇನ್ನೂ ಇದರೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ 2024-25ನೇ ಸಾಲಿನ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮ ಆಯೋಜಿಸಲು ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು.ಹಲವಾರು ಕಾರಣಗಳಿಂದ ಪ್ರತಿ ತಿಂಗಳು ವೇತನವಾಗದೆ ಇರುವ ನೌಕರರಿಗೆ ಕೆ.ಜಿ.ಐ.ಡಿ ವಿಮಾ ಕಂತು ಮತ್ತು ಸಾಲದ ಕಂತುಗಳಿಗೆ ವಿಧಿಸಲಾಗು ತ್ತಿರುವ ಬಡ್ಡಿಯನ್ನು ನಿಲ್ಲಿಸುವಂತೆ ಮತ್ತು ಇದರಿಂದ ನೌಕರರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಲಾಯಿತು.
7ನೆ ವೇತನ ಆಯೋಗ ಜಾರಿಯಾಗಿರುವುದರಿಂದ ಹಬ್ಬದ ಮುಂಗಡವನ್ನು 25 ಸಾವಿರಗಳಿಂದ 50 ಸಾವಿರ ಗಳಿಗೆ ಹೆಚ್ಚಿಸಲು ಆರ್ಥಿಕ ಇಲಾಖೆಯಲ್ಲಿ ಪ್ರಸ್ತಾವನೆ ಇದ್ದು ಕ್ರಮವಹಿಸುವುದಾಗಿ ತಿಳಿಸಿದರು.ಈ ಒಂದು ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಗಿರಿಗೌಡ ಹೆಚ್ ರವರು, ಗೌರವಾಧ್ಯಕ್ಷರಾದ ಎಸ್. ಬಸವರಾಜು ರವರು, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯ ರಾದ ಚೇತನ್ ರವರು, ನಾಗಭೂಷಣ್ ರವರು,ಶಂಕ್ರಪ್ಪ ರವರು,ಪ್ರಶಾಂತ್ ರವರು, ಪ್ರತಿಪ್ ರವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..