ಹುಬ್ಬಳ್ಳಿ –
ವಾಣಿಜ್ಯ ನಗರಿ ಹುಬ್ಬಳ್ಳಿಯ ನಗರದಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿದೆ.ಹೌದು ಕೋಮುಸಂಘರ್ಷದ ಭಾವನೆ ಕೆರಳಿ ಸುವ ಪೊಸ್ಟ್ ಹಾಕಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನ ಗೊಂಡಿದೆ.ಹೀಗಾಗಿ ನಗರದ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ ನಡೆದಿದ್ದು ಪೊಲೀಸ್ ಜೀಪನ್ನು ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಹೌದು ಮಸೀದಿ ಮೇಲೆ ಭಗವಾಧ್ವಜ ಹಾರಿಸಿದಂಥ ವಿಡಿಯೋ ವೊಂದನ್ನು ಯುವಕನೊರ್ವ ತನ್ನ ವಾಟ್ಸ್ ಆಪ್ ಸ್ಟೇಟಸ್ ಗೆ ಹಾಕಿಕೊಂಡಿದ್ದರಿಂದ ಇಂಥದ್ದೊಂದು ಗಲಾಟೆಗೆ ಮೂಲಕಾರಣವಾಗಿದೆ.
ನಗರದ ಆನಂದ ನಗರ ಘೋಡಕೆ ಫ್ಲ್ಯಾಟ್ ನಿವಾಸಿ ಯೊಬ್ಬ ಹೀಗೊಂದು ಎಡಿಟೆಡ್ ವಿಡಿಯೋ ಸ್ಟೇಟಸ್ ಗೆ ಹಾಕಿಕೊಂಡಿದ್ದ.ಈ ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಆ ಯುವಕ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.
ಅತ್ತ ಯುವಕನನ್ನು ವಶಕ್ಕೆ ಪಡೆದ ವಿಷಯ ತಿಳಿಯುತ್ತಿ ದ್ದಂತೆ ನೂರಾರು ಜನ ಮುಸ್ಲಿಂ ಸಮುದಾಯದವರು ಠಾಣೆ ಬಳಿ ಜಮಾಯಿಸಿದ್ದಾರೆ.ಪ್ರತಿಭಟನೆ ಮಾಡಿ ದೊಡ್ಡ ಮಟ್ಟದಲ್ಲಿ ಗಲಾಟೆಯಾಗಿದ್ದು ಇದರಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದೆ.ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಪೊಲೀ ಸರು ಯುವಕನ ವಿಚಾರಣೆ ನಡೆಸುತ್ತಿದ್ದಾರೆ.
ಈ ವೇಳೆ ಠಾಣೆ ಬಳಿ ಜಮಾಯಿಸಿದ ಒಂದು ಸಮುದಾ ಯದ ಜನರು ಕಲ್ಲುತೂರಾಟ ನಡೆಸಿದ್ದು ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೂ ಠಾಣೆಯ ಮುಂದೆ ಸೇರಿದ ಜನರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು ಅಲ್ಲದೆ ಅಶ್ರವಾಯು ಸಿಡಿಸಿದರು ಸಧ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಾಗಿದೆ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಭದ್ರತೆ ಕಲ್ಪಿಸ ಬಾಗಿದೆ.