ಭೀಕರ ಅಪಘಾತ ಸ್ಥಳದಲ್ಲೇ ಮೂವರು ಸಾವು – ಬೈಕ್ ಬಸ್ ನಡುವೆ ಅಪಘಾತ

Suddi Sante Desk
ಭೀಕರ ಅಪಘಾತ ಸ್ಥಳದಲ್ಲೇ ಮೂವರು ಸಾವು – ಬೈಕ್ ಬಸ್ ನಡುವೆ ಅಪಘಾತ

ರಾಯಚೂರು

ಬೈಕ್ ಗೆ ಬಸ್ ವೊಂದು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವಿಗೀಡಾದ ಘಟನೆ ರಾಯಚೂರಿ ನಲ್ಲಿ ನಡೆದಿದೆ.ಬೆಳ್ಳಂ ಬೆಳಿಗ್ಗೆ ನಡೆದ ಈ ಒಂದು ಅಫಘಾತದಲ್ಲಿ ಮೂವರು ಸಾವಿಗೀಡಾಗಿದ್ದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ಬಳಿ ಈ ಒಂದು ಘಟನೆ ನಡೆದಿದ್ದು ಆಂದ್ರ ಮೂಲದ ನಾಗರಾಜ (25), ಸೀನು (30) ಹಾಗೂ ಜಯಪಾಲ ಮೃತರಾದವರಾಗಿದ್ದಾರೆ

ಇನ್ನೂ ಮತ್ತೊಬ್ಬ ಶ್ರೀಕಾಂತ ಕರ್ನೂಲು ಗಂಭೀರ ಗಾಯಗೊಂಡಿದ್ದು ಭತ್ತ ಕಟಾವು ಮಾಡಲು ಯಂತ್ರದ ಸಮೇತ ಮಸ್ಕಿಗೆ ಬಂದಿದ್ದರು ಮೃತರು. ನಿನ್ನೆ ಗುಡದೂರು ಗ್ರಾಮಕ್ಕೆ ಭತ್ತ ಕಟಾವು ಮಾಡಲು ಹೊರಟಿದ್ರು ಒಂದೇ ಬೈಕ್ ಮೇಲೆ ನಾಲ್ವರು ಪ್ರಯಾಣ ಮಾಡುತ್ತಿದ್ದರು. ಬೆಳಗಿನ ಜಾವ ತಡವಾಗಿ ಈ ಒಂದ ಅಪಘಾತ ನಡೆದಿದ್ದು ಅಪಘಾತದ ಬಳಿಕ ಬಸ್ ನಿಲ್ಲಸದೇ ಹೋಗಿದ್ದ ಬಸ್ ಚಾಲಕನು.ಅಪಘಾತದ ಸುದ್ದಿಯನ್ನು ತಿಳಿದ ಮಸ್ಕಿ ಪೊಲೀಸರು ಲಿಂಗಸಗೂರು ಬಸ್ ನಿಲ್ದಾಣಕ್ಕೆ ತೆರಳಿ  ಬಸ್ ನ್ನು ಪತ್ತೆ ಮಾಡಿ ಹಿಡಿದು ತಗೆದುಕೊಂಡು ಬಂದಿದ್ದಾರೆ

ಮಸ್ಕಿ ಪೊಲೀಸರು ಯಾದಗಿರಿ ಡಿಪೋ ಗೆ ಸೇರಿದ ಬಸ್ ಇದ್ಗಾದಿದ್ದು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿರುವ ಮಸ್ಕಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ರಾಯಚೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.