ರಾಯಚೂರು –
ಕಳ್ಳರ ಜೊತೆಗೂಡಿ ಕಳ್ಳತನ ಮಾಡುತ್ತಿದ್ದ ಮುಖ್ಯಪೇದೆ ಸೇರಿ ಒಟ್ಟು ಆರು ಜನರನ್ನು ಬಂಧಿಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.
ಪ್ರಮುಖ ಆರೋಪಿಗಳಾದ ತೌಸೀಫ್, ಮುಖ್ಯಪೇದೆ ಮೊಹಮ್ಮದ್ ಭಾಷಾ, ಪೀಢರ್, ದಾದಾ ಖಲಂದರ್, ಮುಸ್ತಕಾ ಅಲಿ ರೆಹಮಾನ್, ಆರೀಫ್ ಬಂಧಿತರಾದವರಾಗಿದ್ದು ಮಾಜಿ ಗೃಹ ರಕ್ಷಕ ಆರೀಫ್ , ಬಂಗಾರದ ಆಭರಣಗಳ ಉದ್ಯಮಿ ರಘು ಸೆಪ್ಟಂಬರ್ 12 ರಂದು ನಸುಕಿನಲ್ಲಿ ದ್ವಿಚಕ್ರ ವಾಹನದಲ್ಲಿ ರೂಪಾಯಿ 22 ಲಕ್ಷ 99 ಸಾವಿರ ನಗದು ಮತ್ತು 318 ಗ್ರಾಂ ಬಂಗಾರವನ್ನು ತೆಗೆದುಕೊಂಡು ರಾಯದುರ್ಗ ಬಸ್ ನಿಲ್ದಾಣದ ಕಡೆ ಹೊರಟಿದ್ದರು.
,ಬಂಧಿತರ ತಂಡವು, ರಘು ಅವರ ಕಣ್ಣಿಗೆ ಖಾರದ ಪುಡಿಯನ್ನು ಎರಚಿ ಅವರಲ್ಲಿದ್ದ ಹಣ ಮತ್ತು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ, ಪರಾರಿಯಾಗಿತ್ತು. ರಘು ಅವರು ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ತನಿಖೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದಾಗ, ಬ್ರೂಸ್ ಪೇಟ್ ಪೊಲೀಸ್ ಠಾಣೆಯ ಮುಖ್ಯಪೇದೆ ಮೊಹಮ್ಮದ್ ಭಾಷಾ ಅವರು ಪಾಲ್ಗೊಂಡಿರುವುದು ಪತ್ತೆಯಾಗಿದೆ. ಬಂಧಿತ ಮುಖ್ಯಪೇದೆ ಮೊಹಮ್ಮದ್ ಭಾಷಾ ಮತ್ತು ಪ್ರಮುಖ ಆರೋಪಿ ಅಸೀಫ್ ಆತ್ಮೀಯ ಗೆಳೆಯರು.
ಮೊಹಮ್ಮದ್ ಭಾಷಾ ಅವರು ಈ ಪ್ರಕರಣದಲ್ಲಿ ಒಂಭತ್ತು ಲಕ್ಷ ರೂಪಾಯಿಗಳ ಪಾಲನ್ನು ಪಡೆದಿ ದ್ದರು. ಬಂಧಿತರಿಂದ 15 ಲಕ್ಷ 91 ಸಾವಿರ ರೂಪಾಯಿ ನಗದು ಮತ್ತ 116 ಗ್ರಾಂ ಚಿನ್ನಾಭರ ಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ತನಿಖೆ ಮುಂದವರೆದಿದೆ.
ಸುದ್ದಿ ಸಂತೆ ನ್ಯೂಸ್ ರಾಯಚೂರು…..