ಗುವಾಹಟಿ –
ಎರಡು ವಾಹನಗಳು ಡಿಕ್ಕಿಯಾಗಿ ಹತ್ತು ಜನ ಸಾವಿಗೀಡಾದ ಘಟನೆ ಗುವಾಹಟಿ ಯಲ್ಲಿ ನಡೆದಿದೆ ಹೌದು ಮುಖಾಮುಖಿ ಯಾಗಿ ಡಿಕ್ಕಿ ಯಾಗಿ ನಂತರ ಆಳ ಕಮರಿಗೆ ಬಿದ್ದು 10 ಮಂದಿ ಸಾವನ್ನಪ್ಪಿದ್ದಾರೆ
ಈ ಒಂದು ಘಟನೆ ಅಸ್ಸೋಂ- ನಾಗಾಲ್ಯಾಂಡ್ ಗಡಿ ಮರಿಯಾನಿ ಪ್ರದೇಶದಲ್ಲಿ ಬೆಳಗ್ಗೆ ಸಂಭವಿ ಸಿದೆ ಜನರನ್ನು ಹೊತ್ತು ಸಾಗುತ್ತಿದ್ದ ವಾಹನ ಕೊಹಿಮಾದಿಂದ ಮರಿಯಾನಿಗೆ ತೆರಳುತ್ತಿತ್ತು. ಅತಿಯಾದ ಮಂಜಿನಿಂದಾಗಿ ರಸ್ತೆ ಮಸುಕಾಗಿ ಕಾಣಿಸುತ್ತಿತ್ತು.
ಈ ವೇಳೆ ಎದುರಿಗೆ ಬಂದ ಟ್ರಕ್ ಗೆ ವಾಹನ ಡಿಕ್ಕಿಯಾಗಿದೆ.ದುರ್ಘಟನೆಯಲ್ಲಿ ಎರಡೂ ವಾಹನಗಳು ರಸ್ತೆ ಬದಿಯ ಆಳದ ಕಮರಿಗೆ ಬಿದ್ದಿವೆ.ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಮತ್ತು ಕ್ಲೀನರ್ ಪರಿಸ್ಥಿತಿಯೂ ಚಿಂತಾಜನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ…..