ಬೆಂಗಳೂರು –
OTS ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಶಿಕ್ಷಕರಿಗೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಹೌದು ಬೆಂಗಳೂರು ಚಲೋ ಹೋರಾಟವನ್ನು ಶಿಸ್ತು ಬದ್ಧ ವಾಗಿ ಸಂಘಟಿಸಿ ವೆಬಿನಾರ್ ಸಭೆಗಳನ್ನು ಮಾಡಿ ಶಿಕ್ಷಕರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ನಮಗೆ ಆಗುತ್ತಿರುವ ಅನ್ಯಾಯ ನೋವನ್ನ ತೋರ್ಪಡಿಸಲು ನಿರಂತರ 3ದಿನಗಳ ಈ ಹೋರಾಟ ಯಶಸ್ವಿಯಾಗಿದ್ದು ಹಾರ ತುರಾಯಿ ಕಾರ್ಯಕ್ರಮ ಸಂಘಗಳನ್ನ ಧಿಕ್ಕರಿಸಿ ಶಿಕ್ಷಕರೆ ಹೋರಾಟ ಕೈಗೊಂಡಿದ್ದು ಯಶಸ್ವಿಯಾಯಿತು
ಈ ಹೋರಾಟದ ಕೇಂದ್ರ ಬಿಂದು ಮಹೇಶ್ ರಘುನಂದನ್ ಶಿವುಕುಮಾರ್ ಇವರ ಶ್ರಮ ಇವರ ಪ್ರಯತ್ನದ ಫಲವಾಗಿ ಹೋರಾಟವನ್ನು ಕೈಗೊಂಡದ್ದು ಶಿಕ್ಷಕರ ನೋವಿಗೆ ಸ್ಪಂದಿ ಸುವ ಕೆಲಸ ಆಗಿದೆ ನಿರಂತರ 3 ದಿನಗಳ ಹೋರಾಟದಲ್ಲಿ ಪಾಲ್ಗೊಂಡ ನಮ್ಮ ಗ್ರಾಮೀಣ ಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ ಚಿಂತಾಮಣಿ ಶಶಿಕಲಾ,ಸುಧಾ ಶಂಶದ ಬೇಗ್ ತಾಲ್ಲೂಕು ಅಧ್ಯಕ್ಷರು ಕನಕಗಿರಿ ಕೊಟ್ರೇಶಪ್ಪ ಶಿವಕುಮಾರ್ ಚಿಂಚೋಳಿ ತಿಪ್ಪೇಶ್ ಪರಶುರಾಮ್ ಮಂಜುನಾಥ್ ಮೋಹನ್ ಕುಮಾರ್ ವಸಂತ್ ಶಿಕ್ಷಕರು ಹಾಗೂ ರಾಯಚೂರು ಯಾದಗಿರಿ ಕೊಪ್ಪಳ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಂಥ ಶಿಕ್ಷಕರಿಗೆ ಹಾಗೂ ಉಳಿದ ಜಿಲ್ಲೆ ಗಳಿಂದ ಬಂದಂತಹ ನಮ್ಮ ಶಿಕ್ಷಕ ಬಂಧುಗಳಿಗೂ ವಿಶೇಷ ವಾಗಿ ನಮ್ಮ ಹೋರಾಟಕ್ಕೆ ಅನುಮತಿ ಕೇವಲ ಐದೇ ನಿಮಿಷದಲ್ಲಿ ದೂರವಾಣಿ ಕರೆ ಮೂಲಕ ಹೋರಾಟಕ್ಕೆ ಅನುಮತಿ ಕೊಡಿಸಿದ ನಮ್ಮ ನೆಚ್ಚಿನ ಮೆಚ್ಚಿನ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಸರ್ ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಚಂದ್ರಶೇಖರ ನುಗ್ಲಿ ಅವರು ನಮ್ಮ ಹೋರಾಟ ದಲ್ಲಿ ಪಾಲ್ಗೊಂಡು ಸಲಹೆ ಸೂಚನೆ 1ಬಾರಿಗೆ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲು ಶಿಕ್ಷಣ ಸಚಿವರೊಂದಿಗೆ ಮಾತನಾ ಡುವುದಾಗಿ ಹೇಳಿದರು
ಕೆಲಸ ಕಾರ್ಯರೂಪಕ್ಕೆ ಬರದಿದ್ದಾಗ ನಾನು ನಿಮ್ಮೊಂದಿಗೆ ಧರಣಿ ಸತ್ಯಾಗ್ರದಲ್ಲಿ ಕುಳಿತುಕೊಳ್ಳುವುದಾಗಿ ಹೇಳಿದರು ಇವರಿಗೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಸತೀಶ್ ಜಾರಕಿಹೊಳಿ ಇವರಿಗೂ ಮುಖ್ಯವಾಗಿ ಗ್ರೌಂಡ್ ಲೆವಲ್ ದಲ್ಲಿ ಕೆಲಸ ಮಾಡಬೇಕು ಅದರ ಜವಾಬ್ದಾರಿ ನನಗೆ ಬಿಡಿ ಎಂದು ಶಿಕ್ಷಕ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕಟೇ ಶಯ್ಯ ಅವರಿಗೂ ವಿಕಾಸಸೌಧಕ್ಕೆ ನಮ್ಮನ್ನು ಕರೆದು ನಮಗೆ ಧೈರ್ಯ ತುಂಬಿದ ಸಚಿವಾಲಯ ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ಗುರುಸ್ವಾಮಿ ಬೆಂಬಲ ಸಹಾಯ ಸಹಕಾರ ನೀಡುವುದಾಗಿ ಹೇಳಿದರು ಅವರಿಗೆ
ಪರೋಕ್ಷವಾಗಿ ಅಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲ ರಿಗೂ ಹೋರಾಟಗಾರಿಗೆ ಫ್ರೀಡಂ ಪಾರ್ಕ್ ನಲ್ಲಿ ಬಂದಂ ತಹ ಎಲ್ಲ ಶಿಕ್ಷಕ ಬಂಧುಗಳಿಗೆ ಪವಾಡೆಪ್ಪ ರಾಜ್ಯಾಧ್ಯಕ್ಷರು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಹಾಗೂ ಸಂಘದ ಪದಾಧಿಕಾರಿಗಳಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ